Ticker

6/recent/ticker-posts

ಕೆಲಸ ಮಾಡುತ್ತಿರುವ ವೇಳೆ ಕುಸಿದು ಬಿದ್ದು ಕೂಲಿ‌ ಕಾರ್ಮಿಕ ಮೃತ್ಯು


 ಕುಂಬಳೆ:  ಕೆಲಸ ಮಾಡುತ್ತಿರುವ ವೇಳ ಕೂಲಿ‌ ಕಾರ್ಮಿಕ ಕುಸಿದು ಬಿದ್ದು ಮೃತಪಟ್ಟ ಘಟನೆ ‌ನಡೆದಿದೆ. ಪೈವಳಿಕೆ ಪೊಲ್ಲರಕೋಡಿ ನಿವಾಸಿ ಮೋಣು ಯಾನೆ ಮೋಣಪ್ಪ‌ ಮೊಗೇರ  (62) ಮೃತಪಟ್ಟ ಕೂಲಿ‌ ಕಾರ್ಮಿಕ. ಶುಕ್ರವಾರ ಮಧ್ಯಾಹ್ನ ಮನೆಯ ಬಳಿ ಕೆಲಸ ಮಾಡುತ್ತಿದ್ದಾಗ ಕುಸಿದು ಬಿದ್ದರೆನ್ನಲಾಗಿದೆ. ಜತೆಗಿದ್ದವರು ಕೂಡಲೇ ಅವರನ್ನು ಕುಂಬಳೆ ಆಸ್ಪತ್ರೆಗೆ ತಲುಪಿಸಿದರೂ ಆ ವೇಳೆ ಮೃತಪಟ್ಟಿದ್ದರು. ಮೃತರು ಪತ್ನಿ ಬೇಬಿ, ಮಕ್ಕಳಾದ ವಿಶ್ವನಾಥ, ಕೇಶವ, ಪ್ರವೀಣ್ ಕುಮಾರ್, ಸೊಸೆಯಂದಿರಾದ ರಾಜೇಶ್ವರಿ, ಗುಲಾಬಿ, ಸಹೋದರಿಯರಾದ ಗೀತ, ಕಮಲಾಕ್ಷಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

Post a Comment

0 Comments