Ticker

6/recent/ticker-posts

ಬೆಳ್ಳೂರಿನಲ್ಲಿ ವಿಷಪೂರಿತ ಹಾವು ಕಚ್ಚಿ ಕಾರ್ಮಿಕ ಮೃತ್ಯು


 ಬೆಳ್ಳೂರು: ವಿಷಪೂರಿತ ಹಾವು ಕಚ್ಚಿ ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ. ಬೆಳ್ಳೂರು ಗ್ರಾಮ ಪಂಚಾಯತು ವ್ಯಾಪ್ತಿಯ ಕಾಯರ್ ಪದವು, ಬೊಳ್ಳಂದೂರು  ನಿವಾಸಿ ರಮೇಶ್ ಪೂಜಾರಿ (51) ಮೃತಪಟ್ಟ ವ್ಯಕ್ತಿ. ಇವರು ಅಡಿಕೆ ಕೊಯ್ಯುವ ಕಾರ್ಮಿಕರಾಗಿದ್ದಾರೆ. ಇಂದು (ಗುರುವಾರ) ಬೆಳಗ್ಗೆ ಮನೆ ಬಳಿಯ ಕೊಟ್ಟಿಗೆಯಲ್ಲಿ ಕೆಲಸ ಮಾಡುವ ವೇಳೆ  ಹಾವು ಕಚ್ಚಿದೆ. ಕೂಡಲೇ  ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಡಾಕ್ಟರುಗಳ ಸಲಹೆಯಂತೆ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ದಾರಿ ಮಧ್ಯೆ ಅವರು ಕೊನೆಯುಸಿರೆಳೆದರು. ‌ಮೃತರು ಪತ್ನಿ ಪ್ರೇಮ, ಮಕ್ಕಳಾದ ಅಶ್ವಿನ್, ಅಶ್ವಿತಾ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. 

Post a Comment

0 Comments