Ticker

6/recent/ticker-posts

ಕುಂಜತ್ತೂರಿನಲ್ಲಿ ಸ್ಕೂಟರ್- ಮಿನಿ ಲಾರಿ ಡಿಕ್ಕಿ ಹೊಡೆದು ಅಫಘಾತ, ಸ್ಕೂಟರ್ ಸವಾರ ಐಲ ನಿವಾಸಿ ಮೃತ್ಯು


 ಮಂಜೇಶ್ವರ: ಕುಂಜತ್ತೂರಿನಲ್ಲಿ‌ ಸ್ಕೂಟರ್ ಹಾಗೂ ಮಿನಿ ಲಾರಿ ‌ಪರಸ್ಪರ ಡಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ನಡೆದಿದೆ. ಸ್ಕೂಟರ್ ಸವಾರ ಉಪ್ಪಳ ಐಲ ನಿವಾಸಿ ಕಲ್ಪೇಶ್(35) ಮೃತಪಟ್ಟ ವ್ಯಕ್ತಿ. ಇಂದು ( ಮಂಗಳವಾರ) ಮದ್ಯಾಹ್ನ ಈ ಅಫಘಾತ ಉಂಟಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಕಲ್ಪೇಶ್ ರನ್ನು ಕೂಡಲೇ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದರೂ ದಾರಿ ಮಧ್ಯೆ ಅವರು ಕೊನೆಯುಸಿರೆಳೆದರು.  ಮೃತರು ತಂದೆ ಉಮೇಶ್, ತಾಯಿ ಸರಯು ಟೀಚರ್, ಪತ್ನಿ ಸ್ವಾತಿ, ಸಹೋದರಿ ಪೂರ್ಣಿಮ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

Post a Comment

0 Comments