Ticker

6/recent/ticker-posts

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ದುಬೈಗೆ ಪದಾಧಿಕಾರಿಗಳ ಆಯ್ಕೆ

 


ದುಬೈ : ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ದುಬೈ ಘಟಕದ ವಾರ್ಷಿಕ ಮಹಾಸಭೆಯು ನಗರದ ಕರಾಮ ಫಾರ್ಚೂನ್ ಅಟ್ರೀಯುಂ ನ ಸಭಾಂಗಣದಲ್ಲಿ ನಡೆಯಿತು.  ಮಹಾಸಭೆಯ ಅಧ್ಯಕ್ಷತೆಯನ್ನು  ನ್ಯಾ.ಇಬ್ರಾಹಿಂ ಖಲೀಲ್  ವಹಿಸಿದ್ದರು.ಗಡಿನಾಡ  ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕೇಂದ್ರ ಸಮಿತಿಯ ಕೋಶಾಧಿಕಾರಿ ಝಡ್ ಎ ಕಯ್ಯಾರ್,ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಗಲ್ಫ್ ರಾಷ್ಟ್ರದ ಸಲಹಾ ಸಮಿತಿ ಅಧ್ಯಕ್ಷರಾದ ಅಶ್ರಫ್ ಶಾ ಮಂತೂರು,ಉದ್ಯಮಿಗಳಾದ ಶಿವಶಂಕರ ನೆಕ್ರಾಜೆ,ಸಂದೀಪ್ ಅಂಚನ್ ಉಪಸ್ಥಿತರಿದ್ದರು.

ನಂತರ ಸಭೆಯಲ್ಲಿ ನೂತನ  ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ನೂತನ ಗೌರವಾಧ್ಯಕ್ಷರಾಗಿ ನ್ಯಾ.ಇಬ್ರಾಹಿಂ ಖಲೀಲ್,ಗಲ್ಫ್ ರಾಷ್ಟ್ರಗಳ ಸಲಹಾ ಸಮಿತಿಯ ಅಧ್ಯಕ್ಷರಾಗಿ ಅಶ್ರಫ್ ಶಾ ಮಂತೂರು, ಸಲಹಾ ಸಮಿತಿಯ ಮುಖ್ಯ ಸಂಚಾಲಕರಾಗಿ ಶಿವಶಂಕರ ನೆಕ್ರಾಜೆ, ಸಲಹಾ ಸಮಿತಿಯ ಸದಸ್ಯರಾಗಿ ಜೋಸೆಫ್ ಮಥಾಯಿಸ್,ಸಂದೀಪ್ ಅಂಚನ್,ಸುಗಂದರರಾಜ್ ಬೇಕಲ್,ಆತ್ಮನಂದ ರೈ,ರಶೀದ್ ಬಾಯಾರ್,ಸಿದ್ದಿಕ್ ಕಯ್ಯಾರ್, ಅಧ್ಯಕ್ಷರಾಗಿ ಅಮರ್ ದೀಪ್ ಕಲ್ಲೂರಾಯ, ಉಪಾಧ್ಯಕ್ಷರಾಗಿ ಮಂಜುನಾಥ ಕಾಸರಗೋಡು, ಯೂಸುಫ್ ಶೇಣಿ,ಅಲಿ ಸಾಗ್,ಅಮನ್ ತಲೆಕಳ,ಜೇಶ್ ಬಾಯರ್,ಪ್ರಧಾನ ಕಾರ್ಯದರ್ಶಿಯಾಗಿ ಬಾಬ ಬಾಜೂರಿ,ಜತೆ ಕಾರ್ಯದರ್ಶಿಯಾಗಿ ವಿಜಯಕುಮಾರ್ ಶೆಟ್ಟಿ ಗಾಣದಮೂಲೆ,ಅನೀಶ್ ಶೆಟ್ಟಿ ಮಡಂದೂರು,ಆಶೀಖ್ ಮಿಯಾ,ಕೋಶಾಧಿಕಾರಿಯಾಗಿ ಅಶ್ರಫ್ ಪಿ.ಪಿ ಬಾಯರ್ ರವರನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾದ ಅಮರ್ ದೀಪ್ ಕಲ್ಲೂರಾಯ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನಾಡಿದರು. ಕೋಶಾಧಿಕಾರಿ ಅಶ್ರಫ್ ಪಿ. ಪಿ ಬಾಯಾರ್ ಧನ್ಯವಾದವಿತ್ತರು.

Post a Comment

0 Comments