Ticker

6/recent/ticker-posts

Ad Code

ಕುಂಟಾರಿನಲ್ಲಿ ಬೈಕ್- ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಓರ್ವ ಮೃತ್ಯು, ಬೈಕ್ ಸವಾರ ಕೊಟ್ಯಾಡಿ ನಿವಾಸಿ ಯೋಗೀಶ್ ಮೃತಪಟ್ಟ ಯುವಕ


 ಮುಳ್ಳೇರಿಯ: ಬೈಕು ಹಾಗೂ ಟಿಪ್ಪರ್ ಲಾರಿ ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಫಘಾತದಲ್ಲಿ ಓರ್ವ ಮೃತಪಟ್ಟ ಘಟನೆ ನಡೆದಿದೆ. ಬೈಕ್ ಸವಾರ ಅಡೂರು ಕೊಟ್ಯಾಡಿ ನಿವಾಸಿ ಯೋಗೀಶ್(19) ಮೃತಪಟ್ಟ ಯುವಕ. ಇಂದು (ಸೋಮವಾರ) ಸಂಜೆ 5.30 ರ ವೇಳೆ ಕುಂಟಾರು ಬಳಿ ಈ ಅಫಘಾತ ನಡೆದಿದೆ.  ಯೋಗೀಶ್ ಅವರು ಗಾಳಿಮುಖದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಮುಳ್ಳೇರಿಯದಿಂದ ಕೊಟ್ಯಾಡಿ ಭಾಗಕ್ಕೆ  ಪ್ರಯಾಣಿಸುತ್ತಿರುವ ವೇಳೆ ಇವರು ಚಲಾಯಿಸುತ್ತಿರುವ ಬೇಕಿಗೆ ಗಾಳಿಮುಖ ಭಾಗದಿಂದ ಬರುತ್ತಿದ್ದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ  ಹೊಡೆದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಯೋಗೀಶ್ ಗೆ ಗಂಭೀರ ಗಾಯಗಳಾಗಿದ್ದು  ಅವರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆ ವೇಳೆ ಅವರು ಮೃತಪಟ್ಟಿದ್ದರು. ಮೃತರು ತಂದೆ ಶೇಷಪ್ಪ, ತಾಯಿ ಶಾರದ, ಸಹೋದರ ಶಿವಪ್ರಸಾದ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಆದೂರು ಪೊಲೀಸರು ಕೇಸು ದಾಖಲಿಸಿದರು ‌

Post a Comment

0 Comments