.
ಬದಿಯಡ್ಕ : ಅಂಬೇಡ್ಕರ್ ವಿಚಾರ ವೇದಿಕೆ (ರಿ.) ಬದಿಯಡ್ಕ . ಇದರ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ , ಭಾರತರತ್ನ ಡಾ. ಬಿ . ಆರ್. ಅಂಬೇಡ್ಕರ್ ರ 134ನೇ ಜನ್ಮದಿನವನ್ನು ಬಾರಡ್ಕ ಅಂಬೇಡ್ಕರ್ ನಗರದಲ್ಲಿ ಆಚರಿಸಲಾಯಿತು .ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆಯವರ ಅಧ್ಯಕ್ಷತೆಯಲ್ಲಿ ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷೆ ಶಾಂತ ಬಾರಡ್ಕ ಅವರು ಅಂಬೇಡ್ಕರ್ ರ ಭಾವಚಿತ್ರಕ್ಕೆ ಹಾರಾರ್ಪಣೆಗೈಯ್ಯವುದರ ಮೂಲಕ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯದ ( ಪೆರಿಯ ,ಕಾಸರಗೋಡು ) ಸಂಶೋಧನಾ ವಿದ್ಯಾರ್ಥಿ ಸಂದೀಪ್ ಬದಿಯಡ್ಕ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು . ಗಡಿನಾಡ ಗಾಯಕ ವಸಂತ ಬಾರಡ್ಕ , ದಂತ ವೈದ್ಯಕೀಯ ವಿದ್ಯಾರ್ಥಿ ಶಿವಾನಿ ಶಂಕರ್ , ಕಾಸರಗೋಡು ಐಟಿಐ ವಿದ್ಯಾರ್ಥಿ ಕೃಷ್ಣ ಕುಮಾರ್ , ಜಯಂತ ಬಾರಡ್ಕ ಶುಭ ಹಾರೈಸಿದರು . ನಿರಂಜನ , ನಿಶಿತಾ ಶಂಕರ್ , ಗುರು ಪ್ರಸಾದ್ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಸುರೇಖ ಬಾರಡ್ಕ ಸ್ವಾಗತಿಸಿ ಜಯರಾಜ್ ಬಾರಡ್ಕ ವಂದಿಸಿದರು .
0 Comments