Ticker

6/recent/ticker-posts

Ad Code

ಬೇಕೂರು ಶಾಂತಿಗುರಿ ಶ್ರೀ ಮೂಕಾಂಬಿಕಾ ದೇವಸ್ಥಾನದ ಬ್ರಹ್ಮಕಲಶೋತ್ಸವ ಮೇ 17ರಿಂದ ಆರಂಭ - ಸಿದ್ಧತೆ ಪೂರ್ಣ


 ಉಪ್ಪಳ : ಬೇಕೂರು ಸಮೀಪದ ಶಾಂತಿಗುರಿ ಶ್ರೀ ಮೂಕಾಂಬಿಕಾ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪೂರ್ತಿಗೊಂಡು ಇದೀಗ ಶ್ರೀ ಮೂಕಾಂಬಿಕಾ ದೇವಿಯ ಪೀಠಪ್ರತಿಷ್ಠೆ,ಪರಿವಾರ ಸಾನಿಧ್ಯಗಳಾದ ನಾಗದೇವರು, ರಕೇಶ್ವರಿ, ಗ ಮಹಮ್ಮಾಯಿ, ಬೈರವ, ಕೊರಗಜ್ಜ, ಅಣ್ಣಪ್ಪ ಪಂಜುರ್ಲಿ, ಕಲ್ಲು ಪ್ರತಿಷ್ಠೆ ಮತ್ತು  ಬ್ರಹ್ಮಕಲಶಾಭಿಷೇಕ ಮೇ 17ರಿಂದ 19ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.


ಪರಮಪೂಜ್ಯ ಶ್ರೀ ಶ್ರೀ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ, ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಬ್ರಹ್ಮಶ್ರೀ ನಡಿಬೈಲು ಶಂಕರನಾರಾಯಣ ಪ್ರಧಾನಕಾರ್ಮಿಕತ್ವದಲ್ಲಿ ನಡೆಯುವ ಮೇ 17ರಂದು ಅಪರಾಹ್ನ ಗಂಟೆ 3.00ರಿಂದ ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆ ಮೆರವಣಿಗೆ, ಸಂಜೆ ,5.30ಕ್ಕೆ ತಂತ್ರಿಗಳಿಗೆ ಪೂರ್ಣಾಕುಂಭ ಸ್ವಾಗತ, ಸಾಮೂಹಿಕ ಪ್ರಾರ್ಥನೆ,6 ಗಂಟೆಗೆ ಉಗ್ರಾಣ ಮೂಹೂರ್ತ,ಸಂಜೆ 6.30ರಿಂದ ಶಿಲ್ಪಿಗಳಿಂದ ಆಲಯ ಪರಿಗ್ರಹ,ಸ್ಥಳ ಶುದ್ಧಿ, ಪ್ರಾರ್ಥನೆ, ಪುಣ್ಯಾಹವಾಚನ, ಆಚಾರ್ಯಾದಿ ಋತ್ವಿಶ್ವರಣ, ಸಪ್ತಶುದ್ದಿ,, ಪ್ರಾಸಾದ ಶುದ್ದಿ, ವಾಸ್ತುಹೋಮ,ರಾಕ್ಷೆಘ್ರಹೋಮ,ವಾಸ್ತುಪೂಜೆ, ವಾಸ್ತುಬಲಿ ಮೊದಲಾದವುಗಳು ಜರಗಲಿದೆ. ರಾತ್ರಿ 7 ಗಂಟೆಗೆ ನವದುರ್ಗಾ ಕುಣಿತ ಭಜನಾ ತಂಡ ಪುಳಿಕುತ್ತಿ, ಶ್ರೀ ಮಾತಾ ಕುಣಿತ ಭಜನಾ ತ ಪಾರೆಕಟ್ಟೆ, ಗೌರೀಗಣೇಶ ಬಾಲಗೋಕುಲ ಪ್ರತಾಪನಗರ ಇವರಿಂದ ಕುಣಿತ ಭಜನೆ ಜರಗಲಿದೆ.ರಾತ್ರಿ 8 ಗಂಟೆಯಿಂದ  ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ ಪ್ರದರ್ಶನಗೊಳ್ಳಲಿದೆ. ಮೇ 18ಕ್ಕೆ 

ಬೆಳಿಗ್ಗೆ ಗಂಟೆ 6.00ರಿಂದ ಗಣಪತಿ ಹವನ, ಪ್ರಾಯಶ್ಚಿತ್ತಾದಿಗಳು, ಶಾಂತಿಹೋಮ, ನವಗ್ರಹಶಾಂತಿ ಹೋಮ, ಬಿಂಬಶುದ್ಧಿ, ಬಾಲಾಲಯದಲ್ಲಿ ಪೂಜೆ, ಅನುಜ್ಞಾ ಕಲಶ, ಬಾಲಾಲಯ ವಿಸರ್ಜನೆ,ವಿವಿಧ ತಂಡಗಳಿಂದ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ಅನ್ನಸಂತರ್ಪಣೆ ಜರಗಲಿದೆ. ಮಧ್ಯಾಹ್ನ‌ಗಂಟೆ 1ರಿಂದ ಹರೀಶ ಆಚಾರ್ಯ ಕುಂಬಳೆ, ಮಂಗಳೂರು ಪ್ರಾಯೋಜಕತ್ವದಲ್ಲಿ ಹಳೆಯಂಗಡಿ ಸುರೇಶ ಆಚಾರ್ಯ ಮತ್ತು ಬಳಗದವರಿದ "ದಾಸಸಂಕೀರ್ತನೆ".ಬಳಿಕ ವಿವಿಧ ತಂಡಗಳಿಂದ ಭಜನೆ,ಸಂಜೆ 6.30ರಿಂದ ಧಾರ್ಮಿಕ ಸಭೆ ಜರಗಲಿದೆ. ಸಂಜೆ ಗಂಟೆ 6ರಿಂದ ಅಧಿವಾಸ ಕ್ರಿಯೆಗಳು, ಅಧಿವಾಸ ಹೋಮ, ಶ್ರೀ ದೇವರ ಮಂಟಪ ಪ್ರವೇಶ, ಕಲಶಾಧಿವಾಸ,  ಜರಗಲಿದೆ.

ರಾತ್ರಿ 8 ಗಂಟೆಯಿಂದ ಶ್ರೀ ಅರಸು ಡ್ಯಾನ್ಸ್ ಅಕಾಡೆಮಿ ಮಾಡ ಮಂಜೇಶ್ವರದ ನಿರ್ದೇಶನದಲ್ಲಿ ಅರಸು ಡ್ಯಾನ್ಸ್ ಐಲ ಪಾರೆಕಟ್ಟೆ ಅವರಿಂದ  ಶ್ರೀಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆಯ ನೃತ್ಯ ರೂಪಕ ಪ್ರದರ್ಶನಗೊಳ್ಳುವುದು.ಮೇ  19ಕ್ಕೆ ಪ್ರಾತಃ ಗಂಟೆ 5.30ಕ್ಕೆ ಮಹಾಗಣಪತಿ ಹೋಮ,ಕಲಶಪ್ರಧಾನ ಹೋಮ, ಕಲಶಪೂಜೆ ಗಂಟೆ 7.54ರ ಮಿಥುನ ಲಗ್ನದಲ್ಲಿ ಶ್ರೀದೇವರ ಪ್ರತಿಷ್ಠೆ ಕಲಶಾಭಿಷೇಕ ಆನಂತರ ಶ್ರೀ ನಾಗ ರಕೇಶ್ವರಿ ಸಹಿತ ಪರಿವಾರ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ ನಿತ್ಯ ನೈಮಿತ್ತಿಕ ಅನುಷ್ಠಾನ ವಿಧಿ ನಿರ್ಣಯಗಳು,ಮಧ್ಯಾಹ್ನ ಗಂಟೆ 12.30ಕ್ಕೆ ಅಲಂಕಾರ ಸಹಿತ ಮಹಾಪೂಜೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಜರಗಲಿದೆ. 

ಮಧ್ಯಾಹ್ನ ಗಂಟೆ 1.00ರಿಂದ ವಿಠಲ್ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ “ಗೀತಾ ಸಾಹಿತ್ಯ ಸಂಭ್ರಮ” ಕಾರ್ಯಕ್ರಮ ಜರಗಲಿದೆ.ಸಂಜೆ ಗಂಟೆ 300ರಿಂದ ವಿವಿಧ ತಂಡಗಳಿಂದ ಭಜನೆ, ಸಂಜೆ 6.00ರಿಂದ ಧಾರ್ಮಿಕ ಸಭೆ ಜರಗಲಿದೆ.ರಾತ್ರಿ ಗಂಟೆ 8.30ಕ್ಕೆ  ಶ್ರೀರಂಗ ಪೂಜೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ ಜರಗುವುದು. ರಾತ್ರಿ 9 ಗಂಟೆಗೆ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್, ಮಂಜೇಶ್ವರ ಇವರಿಂದ ಕಲ್ಜಿಗದ ಮಾಯ್ಕಾರೆ ಪಂಜುರ್ಲಿತುಳು ಪೌರಾಣಿಕ ಮತ್ತು ಭಕ್ತಿ ಪ್ರಧಾನ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳುವುದು

ಮೇ 20ಕ್ಕೆ  ಸಂಜೆ 3ಗಂಟೆಯಿಂದ ಸಾಮೂಹಿಕ ಪ್ರಾರ್ಥನೆ ಶ್ರೀ ಮಹಾಮ್ಮಾಯಿಗೆ ಮಾರಿಪೂಜೆ ಪರಿವಾರ ದೈವಗಳಿಗೆ ತಂಬಿಲ ಅಗೇಲು ಸೇವೆ,ಸಂಜೆ  6 ಗಂಟೆಯಿಂದ ಕೊರಗಜ್ಜನ ಕೋಲ ಜರಗಲಿದೆ. 

ಕಾರ್ಯಕ್ರಮಗಳ ಯಶಸ್ಬಿಗೆ ಈಗಾಗಲೇ ವಿವಿಧ ಉಪಸಮಿತಿಗಳನ್ನು ರಚಿಸಿ ಕಾರ್ಯ ಪ್ರವೃತ್ತವಾಗಿದೆ ಎಂದು ಸಂಬಂಧಪಟ್ಟವರು ವಿಶೇಷ ಚಾನೆಲ್ ಗೆ ತಿಳಿಸಿದ್ದಾರೆ.

Post a Comment

0 Comments