Ticker

6/recent/ticker-posts

ಆಲ್ಚಾರಿ‌ನಲ್ಲಿ ಮೇ 4ಕ್ಕೆ ದೈವಗಳ ನೇಮೋತ್ಸವ


 ಪೆರ್ಲ : ಬಾಡೂರು ಗ್ರಾಮದ ಆಲ್ಚಾರು ಶ್ರೀ ನಾಗ,ಗುಳಿಗ,ಮಲೆಚಾಮುಂಡಿ ಹಾಗೂ ಪರಿವಾರ ದೈವಗಳ, ಕೊರಗ ತನಿಯ ದೈವ ಕ್ಷೇತ್ರದಲ್ಲಿ ಮೇ 4ಕ್ಕೆ ಶ್ರೀ ದೈ ವಗಳ ನೇಮೋತ್ಸವ ಜರಗಲಿದೆ. ಇದರ ಅಂಗವಾಗಿ ಅಂದು ಬೆಳಗ್ಗೆ 7 ಗಂಟೆಗೆ ಗಣಪತಿಹೋಮ,9 ಗಂಟೆಗೆ ನಾಗತಂಬಿಲ,ಸಂಜೆ 6.30ಗೆ ಅಮೆತ್ತೋಡು ತರವಾಡಿನಿಂದ ಭಂಡಾರ ಆಗಮನ, ಸಂಜೆ 7 ಗಂಟೆಗೆ ಗುಳಿಗನ ಕೋಲ, ರಾತ್ರಿ 9 ಗಂಟೆಯಿಂದ ತೆಂಕು‌ ಬಡಗು ಖ್ಯಾತಿಯ ಭಾಗವತ ಸತ್ಯನಾರಾಯಣ ಪುಣಿಂಚಿತ್ತಾಯ,ಗಿರೀಶ್ ರೈ ಕಕ್ಕೆಪದವು, ಕಾವ್ಯಶ್ರೀ ಆಜೇರು ಅವರಿಂದ ಯಕ್ಷಗಾನ‌ ವೈಭವ, ರಾತ್ರೆ 11.30 ಗಂಟೆಯಿಂದ ಮಲೆಚಾಮುಂಡಿ ಪರಿವಾರ ದೈವಗಳ ನೇಮೋತ್ಸವ,ಪ್ರಾತಃಕಾಲ 5 ಗಂಟೆಗೆ ಕೊರಗ ತನಿಯ ದೈವ ಕೋಲದೊಂದಿಗೆ ನೇಮೋತ್ಸವ ಸಂಪನ್ನಗೊಳ್ಳಲಿದೆ.

Post a Comment

0 Comments