Ticker

6/recent/ticker-posts

ಗೇಟಿನಲ್ಲಿ ನೇತಾಡುತ್ತಾ ಆಟವಾಡುತ್ತಿದ್ದ ವೇಳೆ ಗೋಡೆ ಜರಿದು ಬಿದ್ದು ಐದು ವರ್ಷದ ಬಾಲಕ ಮೃತ್ಯು


 ಗೇಟಿನಲ್ಲಿ ನೇತಾಡುತ್ತಾ ಆಟವಾಡುತ್ತಿದ್ದ ವೇಳೆ ಗೋಡೆ ಜರಿದು ಬಿದ್ದು ಐದು ವರ್ಷದ ಬಾಲಕ ಮೃತಪಟ್ಟ ಘಟನೆ ನಡೆದಿದೆ. ಪಾಲಕ್ಕಾಡ್ ನೈತ್ತಲ ನಿವಾಸಿ‌ ಕೃಷ್ಣಕುಮಾರ್ ರ ಪುತ್ರ ಅಭಿಜಿತ್‌ ಮೃತಪಟ್ಟ ಬಾಲಕ. ಶನಿವಾರ ಸಾಯಂಕಾಲ ಈ ಘಟನೆ ನಡೆದಿದೆ. ಮನೆಯ ಬಳಿಯ ಹಳೆಯ ಗೇಟಿನ ಬಳಿ ಮಕ್ಕಳು ಆಟವಾಡುತ್ತಿದ್ದರು. ಈ ಮಧ್ಯೆ ಅಭಿಜಿತ್ ಗೇಟಿನಲ್ಲಿ ಹತ್ತಿ ನೇತಾಡಿದನೆನ್ನಲಾಗಿದೆ. ಈ ವೇಳೆ ಗೋಡೆ ಜರಿದು  ಬಾಲಕನ ಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ.

Post a Comment

0 Comments