Ticker

6/recent/ticker-posts

ಬದಿಯಡ್ಕ ಅಕ್ಷಯ ಫ್ಯಾನ್ಸಿ ಮಾಲಕ ಶ್ರೀನಿವಾಸ ರಾವ್ ನಿಧನ


 ಬದಿಯಡ್ಕ: ಬದಿಯಡ್ಕ ಪೇಟೆಯಲ್ಲಿರುವ ಅಕ್ಷಯ ಫ್ಯಾನ್ಸಿ ವ್ಯಾಪಾರ ಸಂಸ್ಥೆಯ ಮಾಲಕ ಶ್ರೀನಿವಾಸ ರಾವ್(74) ನಿಧನರಾದರು. ಅವರು ಸಣ್ಣ ಮಟ್ಟದ ಅಸೌಖ್ಯದ ಹಿನ್ನೆಲೆಯಲ್ಲಿ ನಿನ್ನೆ (ಶುಕ್ರವಾರ) ಬೆಳಗ್ಗೆ ಪುತ್ತೂರು ಆಸ್ಪತ್ರೆಗೆ ಹೋಗಿದ್ದರು. ರಾತ್ರಿ ವೇಳೆ ಪುತ್ತೂರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತದೇಹವನ್ನು ಬದಿಯಡ್ಕ ಮನೆಗೆ ತರಲಾಗಿದೆ. ಇಂದು ಅಂತ್ಯ ಸಂಸ್ಕಾರ ನಡೆಯಲಿದೆ‌.  ಮೃತರು ಪತ್ನಿ ಪುಷ್ಪ ರಾಜೀವಿ, ಮಕ್ಕಳಾದ ರೋಷನ್ ಕಿರಣ್, ರಚನ, ಅಳಿಯ ಡಾ.ಯಶಸ್ ಸೈಪಂಗಲ್, ಸೊಸೆ ಅಂಜು , ಸಹೋದರ ಸಹೋದರಿಯರಾದ ಸಂಜೀವ ರಾವ್, ವಸಂತ, ಶಿವಂತಿ, ಜಯಶ್ರೀ, ಸಾವಿತ್ರಿ, ಅರುಣ, ಯಶೋಧ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Post a Comment

0 Comments