ಮಂಗಳೂರು : ಮೇ 1 ರಂದು ಸಕ್ರಿಯ ಹಿಂದೂ ಸಂಘಟನಾ ಕಾರ್ಯಕರ್ತ ಸುಹಾಸ್ ಶೆಟ್ಟಿಯವರನ್ನು ವಾಹನ ಅಡ್ಡಗಟ್ಟಿ ಇರಿದು ಕೊಲೆಗೈದ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಾಮಂಜೂರು ನಿವಾಸಿ ನೌಷಾದ್ ಯಾನೆ ಚೊಟ್ಟೆ ನೌಷಾದ್,ಕಳವಾರು ನಿವಾಸಿ ಅಜರುದ್ದೀನ್,ಕಾಪು ನಿವಾಸಿ ಅಬ್ದುಲ್ ಖಾದರ್ ಯಾನೆ ನೌಫಲ್ ಬಂಧಿತರು
ಬಂಧಿತರನ್ನು ಎಲ್ಲಾ ಕೇಸುಗಳಲ್ಲಿ ಹತ್ಯೆ ಪ್ರಕರಣದ ಭಾಗಿಯಾಗಿದ್ದ ಪ್ರಮುಖ ಆರೋಪಿ ಚೊಟ್ಟೆ ನೌಷದ್ (ನೌಷದ್) ವಾಮಂಜೂರು ಎಂಬಾತನು ಸುಹಾಸ್ ಶೆಟ್ಟಿಯ ಕೊಲೆಗೆ ಉಳಿದ ಆರೋಪಿಗಳ ಜೊತೆ ಸಂಚು ರೂಪಿಸಿ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದನು.
ಆರೋಪಿಗಳ ಪೈಕಿ ಚೊಟ್ಟೆ ನೌಶಾದ್ ಹಲವು ಹಿಂದೂಗಳ ಹತ್ಯೆ ಕೃತ್ಯೆಗೆ ಹಣ ಹೊಂದಿಸುತ್ತಿದ್ದನೆಂದು ತಿಳಿದಿದೆ.ಅಜರುದ್ದೀನ್ ಕೂಡ ಈ ಹಿಂದೆ ಪಣಂಬೂರು, ಸುರತ್ಕಲ್, ಮುಲ್ಕಿ ಪೊಲೀಸ್ ಠಾಣೆಗಳಲ್ಲಿ 3 ಕಳವು ಪ್ರಕರಣ ದಾಖಲಾಗಿರುತ್ತದೆ. ಈತನು ಪ್ರಕರಣದ ಆರೋಪಿಗಳಿಗೆ ಕೊಲೆಯಾದ ಸುಹಾಸ್ ಶೆಟ್ಟಿಯ ಚಲನವಲನದ ಬಗ್ಗೆ ಮಾಹಿತಿಯನ್ನು ನೀಡಿ ಕೊಲೆಗೆ ಸಹಕರಿಸಿದ್ದಾನೆ.ಹಾಗೂ ಮತ್ತೋರ್ವ ಆರೋಪಿ ಅಬ್ದುಲ್ ಖಾದರ್ ನೌಫಲ್ ಎಂಬಾತನು ಆರೋಪಿಗಳು ಕೊಲೆ ಕೃತ್ಯ ನಡೆಸಿದ ನಂತರ ಕಾರಿನಲ್ಲಿ ಪರಾರಿಯಾಗುವ ಸಮಯದಲ್ಲಿ ಆರೋಪಿಗಳಿಗೆ ಸಹಕರಿಸಿದ್ದನು ಎಂದು ತಿಳಿದಿದೆ.
3 ಆರೋಪಿಗಳನ್ನು ಬಂಧಿಸಿದ್ದು ಹೆಚ್ಚಿನ ತನಿಖೆ ಕುರಿತು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ .ಈ ಹತ್ಯೆ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಬಿಜೆಪಿ ನಿಯೋಗ ಪೊಲೀಸ್ ಆಯುಕ್ತರಿಗೆ ಮಾನಸಿ ಮಾಡಿದ್ದರು . ಈ ಪ್ರಕರಣದ ತನಿಖೆ ಎನ್.ಐ .ಎ ಗೆ ನೀಡಿದರೆ ಮತ್ತಷ್ಟು ಪ್ರಕರಣದ ಆರೋಪಿಗಳು ಹಾಗೂ ಬಟ್ಟೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಭಾಗಿಯಾಗಿರುವುದು ಸ್ಪಷ್ಟ ಎಂದು ಬಿಜೆಪಿ ನಿಯೋಗ ಆರೋಪಿಸಿದೆ.
0 Comments