Ticker

6/recent/ticker-posts

Ad Code

ಸ್ವರ್ಗದ ಗ್ರಂಥಾಲಯಕ್ಕೆ ಭೇಟಿಯಿತ್ತು ಪುಸ್ತಕ ಭಂಢಾರದ ರಸಾಸ್ವದನೆ ಸವಿದ ವಿದ್ಯಾರ್ಥಿಗಳು


ಪೆರ್ಲ : ಸ್ವರ್ಗದ ಎಂ.ಕೆ ಬಾಲಕೃಷ್ಣ ಗ್ರಂಥಾಲಯದ ಮತ್ತು ವಾಚನಾಲಯಕ್ಕೆ  ವಾಚನಾ ಸಪ್ತಾಹದ ಅಂಗವಾಗಿ ಕಜಂಪಾಡಿ GWLP ಶಾಲಾ ಮಕ್ಕಳು ಭೇಟಿ ನೀಡಿ ಮಾಹಿತಿಗಳನ್ನು ಹಂಚಿಕೊಂಡರು.ಕಜಂಪಾಡಿ ಶಾಲಾ ಮುಖ್ಯೋಪಾಧ್ಯಾಯರಾದ ಮೋಹನ ನಾರಾಯಣ,ಹಿರಿಯ ಅಧ್ಯಾಪಕರಾದ ಕೃಷ್ಣ ರಾಜ,ಶಿಕ್ಷಕಿಯರಾದ ಶ್ರೀಮತಿ ಭ್ಯಾಗ್ಯಶ್ರೀ,ಶ್ರೀಮತಿ ಆಶಾಲತಾ ಜೊತೆಗಿದ್ದರು.ವಾಚನಾ ಸಪ್ತಾಹದ ಅಂಗವಾಗಿ ಓದುವಿಕೆಯ ಮಹತ್ವ,ಪುಸ್ತಕ ಪರಿಚಯ ಹಾಗೂ ಸ್ಪರ್ಧೆಗಳನ್ನು ನಡೆಸಲಾಯಿತು.ಎಣ್ಮಕಜೆ‌ ಗ್ರಾಮ ಪಂಚಾಯತ್ ಸದಸ್ಯರೂ,ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಸದಸ್ಯರಾದ ರಾಮಚಂದ್ರ ಎಂ, ಗ್ರಂಥಾಲಯದ ಅಧ್ಯಕ್ಷರಾದ ರವಿರಾಜ್ ಎಸ್,ಕಾರ್ಯದರ್ಶಿ ರವಿ ವಾಣೀನಗರ,ಗ್ರಂಥಪಾಲಕಿ ಶ್ರೀಮತಿ ಅನಿತಾ ಮಕ್ಕಳೊಂದಿಗೆ ಮಾಹಿತಿ ವಿನಿಮಯ ನಡೆಸಿದರು.ಕಾರ್ಯದರ್ಶಿ ರವಿ ವಾಣೀನಗರ ಸ್ವಾಗತಿಸಿ ಗ್ರಂಥಪಾಲಕಿ ಶ್ರೀಮತಿ ಅನಿತಾ ವಂದಿಸಿದರು.

Post a Comment

0 Comments