ಮಹಿಳೆಯೊಬ್ಬರು ಪೊಲೀಸ್ ಇನ್ಸ್ಪೆಕ್ಟರ್ಗೆ ಲವ್ ಲೆಟರ್ ಬರೆದು ತೀವ್ರ ಪ್ರೀತಿ ವ್ಯಕ್ತಪಡಿಸಲು ಹೋಗಿ ಕೇಸು ದಾಖಲಿಸಿಕೊಂಡ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ. ಇನ್ಸ್ಪೆಕ್ಟರ್ ಸತೀಶ್ಗೆ ರಾಮಮೂರ್ತಿ ನಗರ ನಿವಾಸಿಯಾಗಿರುವ ವನಜಾ ಅನ್ನುವವರು ಪ್ರೀತಿಸುವಂತೆ ಪದೇ ಪದೇ ಮೆಸೇಜ್ ಮಾಡುತ್ತಿದ್ದರು. ಅಲ್ಲದೇ ಠಾಣೆಯಲ್ಲಿ ಇನ್ಸ್ಪೆಕ್ಟರ್ ಇಲ್ಲದಾಗ ಅವರ ಟೇಬಲ್ ಮೇಲೆ ಲವ್ ಲೆಟರ್ ಜೊತೆಗೆ ಪ್ರೀತಿಯ ದ್ಯೋತಕವಾದ ಹೂ ಬೊಕೆ ಹಾಗೂ ಎರಡು ಶೀಟ್ನಲ್ಲಿ ಇಪ್ಪತ್ತು ಮಾತ್ರೆಗಳನ್ನೂ ಇಟ್ಟು ಹೋಗಿದ್ದಾರೆ. ನೀವು, ನನ್ನ ಪ್ರೀತಿಯನ್ನು ಒಪ್ಪುತ್ತಿಲ್ಲ, ನಿಮಗೆ ತೊಂದರೆ ಕೊಡಲು ನನಗೆ ಇಷ್ಟ ಇಲ್ಲ. ನೀವು ನನ್ನ ಪ್ರೀತಿ ಒಪ್ಪಿಕೊಳ್ಳದಿದ್ದರೆ, ನಾನು ಆತ್ಮಹತ್ಯೆ ಮಾಡಿಕೊಳ್ತುತ್ತೇನೆ. ನನ್ನ ಸಾವಿಗೆ ನೀವೆ ಕಾರಣ ಎಂದು ಹಾರ್ಟ್ ಚಿತ್ರ ಬರೆದು ಅದರಲ್ಲಿ ಚಿನ್ನಿ ಲವ್ ಯೂ, ಯೂ ಮಸ್ಟ್ ಲವ್ ಮೀ ಎಂದು ರಕ್ತದಲ್ಲಿ ಪತ್ರ ಬರೆದಿದ್ದಾಳೆ. ಮಹಿಳೆ ಪತ್ರ ಬರೆಯುವ ಮುನ್ನ ಮೊಬೈಲ್ಗೆ ಸಾಕಷ್ಟು ಬಾರಿ ಮೆಸೇಜ್ ಮಾಡುತ್ತಿದ್ದಳಂತೆ ಇದರಿಂದ ಬೇಸತ್ತು ಇನ್ಸ್ಪೆಕ್ಟರ್ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಾರೆ. ಒಂದಲ್ಲ, ಎರಡಲ್ಲ ಹತ್ತಕ್ಕೂ ಹೆಚ್ಚು ನಂಬರ್ಗಳಿಂದ ಮೆಸೆಜ್ ಮಾಡಿದ್ದರಿಂದ ಅಷ್ಟೂ ನಂಬರ್ಗಳನ್ನೂ ಇನ್ಸ್ಪೆಕ್ಟರ್ ಬ್ಲಾಕ್ ಮಾಡಿದ್ದಾರೆ. ಫೋನ್ ನಂಬರ್ಗಳನ್ನು ಬ್ಲಾಕ್ ಮಾಡಿದ್ದಕ್ಕೆ ಇದೀಗ ಪತ್ರ ಬರೆದಿದ್ದಾಳೆ. ಮಹಿಳೆ ಕಾಟಕ್ಕೆ ಬೇಸತ್ತು, ಇನ್ಸ್ಪೆಕ್ಟರ್ ಮಹಿಳೆ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿ, ಆತ್ಮಹತ್ಯೆ ಬೆದರಿಕೆ ಆರೋಪದಲ್ಲಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 Comments