ಪೆರ್ಲ : ಮುಸ್ಸಂಜೆಯ ವೇಳೆ ಪೇಟೆ ಮಧ್ಯದಲ್ಲಿ ಹಂದಿಯೊಂದು ಪ್ರತ್ಯಕ್ಷವಾಗಿದ್ದು ಇದ್ದಕ್ಕಿದ್ದಂತೆ ದಿಗ್ಬ್ರಾಂತಿಯ ವಾತವರಣ ಸೃಷ್ಠಿಸಿತು. ಪಾದಚಾರಿಗಳು,ವಾಹನ ಸವಾರರ ಎದುರಿಗೆ ಅಡ್ಡಾದಿಡ್ಡಿ ಓಡಾಡಿದ ಹಂದಿಯನ್ನು ಕಂಡವರು ಆತಂಕದಲ್ಲಿರುವಾಗಲೇ ಅದು ಸಾಕು ಹಂದಿ ಎಂದು ಸ್ಥಳೀಯರು ಗುರುತಿಸಿದರು. ನಿಟ್ಟುಸಿರು ಬಿಟ್ಟ ಜನ ಹಂದಿಯನ್ನು ಸೆರೆ ಹಿಡಿದು ಪಳಗಿಸುವಲ್ಲಿ ಯಶಸ್ವಿಯಾದರು. ಸಂಜೆಯ ವೇಳೆ ಕಾಟುಕುಕ್ಕೆಯ ಹಂದಿ ಸಾಕಾಣೆ ಕೇಂದ್ರವೊಂದರಿಂದ ಗೂಡ್ಸ್ ವಾಹನದಲ್ಲಿ ತುಂಬಿಸಿ ಸಾಗಿಸುವ ವೇಳೆ ಅದರಿಂದ ಒಂದು ಹೊರ ಬಿದ್ದಿದ್ದು ಪೇಟೆಯಲ್ಲಿ ಅಲ್ಪ ಸಮಯ ಈ ರೀತಿಯ ಆತಂಕ ಸೃಷ್ಟಿಯಾಗಲು ಕಾರಣವಾಗಿದೆ.ಬಳಿಕ ಹಂದಿಯನ್ನು ಸಾಕಣೆ ಕೇಂದ್ರವರು ಬಂದು ಕೊಂಡೊಯ್ದರು ಎಂದು ತಿಳಿದು ಬಂದಿದೆ.

0 Comments