Ticker

6/recent/ticker-posts

Ad Code

ಶಬರಿಮಲೆ ಚಿನ್ನ ಲೂಟಿ ಪ್ರಕರಣ: ಚಿನ್ನ ವ್ಯಾಪಾರಿ ಗೋವರ್ಧನ್, ಸ್ಮಾರ್ಟ್ ಕ್ರಿಯೇಷನ್ಸ್ ಸಿಇಒ ಪಂಕಜ್ ಭಂಡಾರಿ ಸೆರೆ


 ತಿರುವನಂತಪುರ; ಶಬರಿಮಲೆ ಚಿನ್ನ ಲೂಟಿ ಪ್ರಕರಣದಲ್ಲಿ ದ್ವಾರಪಾಲಕ ಶಿಲ್ಪಗಳ ಪದರಕ್ಕೆ ಚಿನ್ನ ಲೇಪಿಸಿದ ಚೆನ್ನೈ ಸ್ಮಾರ್ಟ್ ಕ್ರಿಯೇಷನ್ ಸಿಇಒ ಪಂಕಜ್ ಭಂಡಾರಿ ಮತ್ತು ಪದರದಿಂದ ಬೇರ್ಪಡಿಸಿದ ಚಿನ್ನವನ್ನು ಖರೀದಿಸಿದ ಬಳ್ಳಾರಿಯ ರೋಧಂ ಜ್ಯುವೆಲ್ಲರಿ ಮಾಲೀಕ ಗೋವರ್ಧನ್ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿದೆ. ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ವಿಳಂಬ ಯಾಕೆ ಎಂದು ಹೈಕೋರ್ಟ್ ಶುಕ್ರವಾರ ಎಸ್‌ಐಟಿಯನ್ನು ಪ್ರಶ್ನಿಸಿದ ಬೆನ್ನಲ್ಲೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ತಿರುವನಂತಪುರ ಇಂಚಕ್ಕಲ್‌ನಲ್ಲಿರುವ ಕ್ರೈಂ ಬ್ರ್ಯಾಂಚ್ ಪ್ರಧಾನ ಕಚೇರಿ ಅಪರಾಧ ಶಾಖೆಯ ಕಚೇರಿಯಲ್ಲಿ ಇಬ್ಬರನ್ನು ವಿಚಾರಣೆ ನಡೆಸಿ ಬಂಧನಗಳನ್ನು ದಾಖಲಿಸಲಾಗಿದೆ. ಚಿನ್ನ ಲೂಟಿಯಲ್ಲಿ ಸ್ಮಾರ್ಟ್ ಕ್ರಿಯೇಷನ್ ಪಾತ್ರ ಬಹಿರಂಗಗೊಂಡಿದೆ ಎಂದು ಎಸ್‌ಐಟಿ ತಿಳಿಸಿದೆ. ಚಿನ್ನ ಲೂಟಿ ಪ್ರಕರಣದಲ್ಲಿ ಇದೇ ಮೊದಲ ಬಾರಿ ಹೊರ ರಾಜ್ಯದ ಆರೋಪಿಗಳನ್ನು ಬಂಧಿಸಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋಟ್ಟಿ ಶಬರಿಮಲೆಯಿಂದ ಹೊರ ಕೊಂಡೊಯ್ದ ದ್ವಾರಪಾಲಕ ಶಿಲ್ಪಗಳ ಪದರಗಳಿಂದ ಸ್ಮಾರ್ಟ್ ಕ್ರಿಯೇಷನ್ಸ್‌ನಲ್ಲಿ ಚಿನ್ನ ಬೇರ್ಪಡಿಸಲಾಗಿದೆ. ಪದರಗಳಿಗೆ ಲೇಪಿಸಿದ ಬಳಿಕ ಉಳಿದ 476 ಗ್ರಾಂ ಚಿನ್ನವನ್ನು ಮಧ್ಯವರ್ತಿ ಕಲ್ಪೇಶ್ ಮೂಲಕ ಗೋವರ್ಧನ್‌ಗೆ ಮಾಡಲಾಗಿದೆ. ಗೋವರ್ಧನ್ ಜ್ಯುವೆಲ್ಲರಿಯಿಂದ 800 ಗ್ರಾಂ ಗೂ ಹೆಚ್ಚು ಚಿನ್ನ ಪತ್ತೆಯಾಗಿದೆ. ಅಕ್ಟೋಬರ್‌ನಲ್ಲಿ ಎಸ್‌ಐಟಿ ಈ ಚಿನ್ನವನ್ನು ವಶಪಡಿಸಿಕೊಂಡಿತ್ತು.

ಕಂಪನಿಯು ಚಿನ್ನದ ಪದರವನ್ನು ಸ್ವೀಕರಿಸುವುದಿಲ್ಲ. ಸ್ಮಾರ್ಟ್ ಕ್ರಿಯೇಷನ್ಸ್ ಗೆ ತಾಮ್ರದ ಪದರ ತರಲಾಗಿದೆ ಎಂದು ಕಂಪೆನಿಯ ಸಿಇಒ ಪಂಕಜ್ ಭಂಡಾರಿ ಎಸ್‌ಐಟಿಗೆ ಹೇಳಿಕೆ ನೀಡಿದ್ದರು. ಇದು ಸುಳ್ಳು ಎಂದು ತನಿಖೆಯಲ್ಲಿ  ಸಾಬೀತಾಗಿದೆ. ಕಂಪನಿಯಲ್ಲಿ ಚಿನ್ನ ಬೇರ್ಪಡಿಸಲು ಪರಿಣಿತರಿಲ್ಲದ ಕಾರಣ, ಮಹಾರಾಷ್ಟ್ರದಿಂದ ತಜ್ಞರನ್ನು ತಂದು ರಾಸಾಯನಿಕ ದ್ರಾವಣ ಬಳಸಿ ಚಿನ್ನ ಭೇರ್ಪಡಿಸಲಾಗಿದೆ ಎಂದು ಪಂಕಜ್ ಭಂಡಾರಿ ಕೊನೆಗೂ ಒಪ್ಪಿಕೊಂಡಿದ್ದಾರೆ.

ಶಬರಿಮಲೆಯ ದೇಗುಲದ ಮುಂಭಾಗದಲ್ಲಿರುವ ದ್ವಾರಪಾಲ ಶಿಲ್ಪಗಳ ಪ್ರಸ್ತುತ ಪದರಗಳು ಅಸಲಿಯೇ ಅಥವಾ ನಕಲಿಯೇ ಎಂದುದು ವೈಜ್ಞಾನಿಕ ಪರೀಕ್ಷೆಯಲ್ಲಿ ತಿಳಿದು ಬರಲಿದೆ‌. ಈ ವರದಿ ಇನ್ನೂ ಬಂದಿಲ್ಲ. ಶಬರಿಮಲೆಯ ಚಿನ್ನವನ್ನು ಪ್ರಾಚ್ಯ ವಸ್ತುವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಾಂತರ ರೂ.ಗೆ ಮಾರಾಟವಾಗಿವೆ ಎಂಬ ಆರೋಪ ಕೇಳಿಬರುತ್ತಿರುವ ಸಂದರ್ಭದಲ್ಲಿ ಎಸ್‌ಐಟಿಯ ನಿರ್ಣಾಯಕ ನಡೆ ಇರಿಸಿದೆ.

Post a Comment

0 Comments