Ticker

6/recent/ticker-posts

Ad Code

ಪೆರ್ಲದಲ್ಲಿ ಕಾಂಗ್ರೆಸ್ ನಾಯಕನ ಆಡಿಯೋ ಮತ್ತೆ ವೈರಲಾಗಿಸಿ ಪಕ್ಷದ ವಿರುದ್ಧ ಪಿತೂರಿ : ಚುನಾವಣಾ ಆಯೋಗಕ್ಕೆ ದೂರು

 

ಪೆರ್ಲ : ವಿಧಾನ ಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಎಣ್ಮಕಜೆಯ  ಕಾಂಗ್ರೆಸ್ ಪಕ್ಷದ ಪ್ರಮುಖ‌ ನಾಯಕರೊಬ್ಬರ ಮಾತುಗಳು ಎಂದು ಹೇಳಲಾಗುತ್ತಿರುವ ಆಡಿಯೋವೊಂದು ಇದೀಗ ವಿವಿಧ ವಾಟ್ಸಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ಚುನಾವಣಾ ಆಯೋಗಕ್ಜೆ ದೂರು ನೀಡುತ್ತಿರುವುದಾಗಿ ಕಾಂಗ್ರೆಸ್ ನೇತಾರ ರಾಧಾಕೃಷ್ಣ ಜೆ.ಎಸ್. ಪ್ರತಿಕ್ರಿಯಿಸಿದ್ದಾರೆ.

 ಕಳೆದ ಸ್ಥಳಿಯಾಡಳಿತ ಚುನಾವಣೆಯ ಸಂದರ್ಭ ಎಣ್ಮಕಜೆ ಪಂಚಾಯತಿನ ಯುಡಿಎಫ್ ನೊಳಗೆ ಉಂಟಾದ ಅಂತರಿಕ ಬಿಕ್ಕಟ್ಟಿನ ಸಂದರ್ಭ ಪಕ್ಷ ಪರವಾಗಿ ಹಾಕಿದ ಆಡಿಯೋ ವಾಯ್ಸ್ ನ್ನು ತೆಗೆದಿಟ್ಟು ಇದೀಗ ಚುನಾವಣಾ ಸಂದರ್ಭ ಅಪಪ್ರಚಾರಕ್ಕೆ ತೊಡಗಿದ್ದು ಯುಡಿಎಫ್ ನ ಒಗ್ಗಟ್ಟು ಮುರಿಯಲು ಈ ಸಂಚು ರೂಪಿಸಿರುವುದಾಗಿ ಅವರು ತಿಳಿಸಿದ್ದು ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತಿರುವುದಾಗಿ ತಿಳಿಸಲಾಗಿದೆ.

Post a Comment

0 Comments