Ticker

6/recent/ticker-posts

Ad Code

ಕಾಸರಗೋಡಿನ ಹಿಂದುಳಿದಿರುವಿಕೆ ನೋವುಂಟುಮಾಡುತ್ತದೆ : ಕಿರುತೆರೆ ನಟಿ ಲಕ್ಷ್ಮಿ ಪ್ರಿಯಾ

 

ಕಾಸರಗೋಡು : ಎಲ್ಲಾ ಅನುಕೂಲಕರ ಪರಿಸ್ಥಿತಿಗಳ ಹೊರತಾಗಿಯೂ, ಭಾಷೆ ಮತ್ತು ಸಂಸ್ಕೃತಿಗಳ ಸಂಗಮ ಸ್ಥಳವಾಗಿರುವ ಜಿಲ್ಲೆಯ ಹಿಂದುಳಿದಿರುವಿಕೆ, ಜಿಲ್ಲೆಯಲ್ಲಿ  ಬಾಲ್ಯವನ್ನು ಕಳೆದ ವ್ಯಕ್ತಿಯಾಗಿ ನನಗೆ ತುಂಬಾ ನೋವುಂಟುಮಾಡುತ್ತದೆ ಎಂದು ಚಲನಚಿತ್ರ ಮತ್ತು ಧಾರಾವಾಹಿ ತಾರೆ ಲಕ್ಷ್ಮಿ ಪ್ರಿಯಾ ಹೇಳಿದರು. ಅವರು  ಕಾಸರಗೋಡು ವಿಧಾನಸಭಾ ಕ್ಷೇತ್ರದ ಮಾನ್ಯದಲ್ಲಿ ನಡೆದ ಎನ್ ಡಿ ಎ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಚಿಕಿತ್ಸೆ, ಉದ್ಯೋಗ ಮತ್ತು ಶಿಕ್ಷಣದಲ್ಲಿ ತೊಂದರೆಗಳನ್ನು ಎದುರಿಸುತ್ತಿರುವ ಎಂಡೋಸಲ್ಫಾನ್ ಸಂತ್ರಸ್ತರು ಸೇರಿದಂತೆ ಜಿಲ್ಲೆಯ ಜನರು ಈ ಬಾರಿ ಮೇ 9ರ ಬಗ್ಗೆ ಯೋಚಿಸಿ ಅಭಿವೃದ್ಧಿಗಾಗಿ ತಮ್ಮ ಮತದಾನದ ಹಕ್ಕನ್ನು ಬಳಸಬೇಕೆಂದು ಅವರು ವಿನಂತಿಸಿದರು.

ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣನ್ ಎಂ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಮತ್ತು ಬದಿಯಡ್ಕ ಪಂಚಾಯತ್ ಉಪಾಧ್ಯಕ್ಷೆ ಅಶ್ವಿನಿ ಕೆ. ಎಂ,  ಸುಕುಮಾರ್ ಕುದ್ರೆಪ್ಪಾಡಿ, ಜಿಲ್ಲಾ ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ರೈ ಗೋಸಾಡ, ಶ್ರೀಧರ ಬೆಳ್ಳೂರು, ಬದಿಯಡ್ಕ ಪಶ್ಚಿಮ ವಲಯದ ಅಧ್ಯಕ್ಷ ಮಹೇಶ್ ವಳಕುಂಜೆ ಮಾತನಾಡಿದರು.

Post a Comment

0 Comments