Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮೀಯಪದವಿನಲ್ಲಿ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ವಿದ್ಯುಕ್ತ ಚಾಲನೆ


ಮಂಜೇಶ್ವರ: ಮಕ್ಕಳ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿರುವ ಮಂಜೇಶ್ವರ ಉಪಜಿಲ್ಲಾ  ಕಲೋತ್ಸವವು ಕಲಾ ಸಂಭ್ರಮದ ಮಹಾಪರ್ವವಾಗಿ ರೂಪುಗೊಳ್ಳಲಿರುವ ಕಾರ್ಯಕ್ರಮಕ್ಕೆ ಶುಭಾರಂಭ ದೊರೆಯಿತು.

ಮೀಯಪದವಿನ  ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಹಾಗೂ ವಿದ್ಯಾವರ್ಧಕ ಏಯುಪಿ ಶಾಲೆಗಳ ಆವರಣದಲ್ಲಿ ನಡೆಯುತ್ತಿರುವ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವವನ್ನು  ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಸಂಚಾಲಕರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಿದರು.

.ಈ ಸಂದರ್ಭದಲ್ಲಿ ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಎ.ತಾಜುದ್ದೀನ್ ಮತ್ತು ಡವಲಪ್ಮೆಂಟ್ ಸ್ಟೇಂಡಿಂಗ್ ಕಮಿಟಿ ಚೇಯರ್ಮೇನ್   ಸಲೀಂ ಎಮ್ ಎ ಅವರು ಶುಭ ಹಾರೈಸಿದರು.

ಉಪಜಿಲ್ಲಾ ವಿದ್ಯಾಧಿಕಾರಿ  ನಾರಾಯಣ ದೇಲಂಪಾಡಿ, ವಿದ್ಯಾವರ್ಧಕ ಎಯುಪಿ ಶಾಲಾ ಆಡಳಿತ ಸಲಹೆಗಾರ ಶ್ರೀಧರ್ ರಾವ್ ಆರ್ ಎಮ್, ವಿದ್ಯಾವರ್ಧಕ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯಿನಿ  ಮೃದುಲ, ಇನ್ನೂ ಅನೇಕರು ಉಪಸ್ಥಿತರಿದ್ದರು.

ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲ  ರಮೇಶ್ ಕೆ ಸ್ವಾಗತಿಸಿ, ವಿದ್ಯಾವರ್ಧಕ ಎಯುಪಿ ಶಾಲಾ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ವಂದಿಸಿದರು.

Post a Comment

0 Comments

ಜಾಹೀರಾತು

Responsive Advertisement