ಸೀತಾಂಗೋಳಿ: ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಗಾಯಗೊಂಡಿದ್ದಾರೆ. ಮುಖಾರಿಕಂಡ ಸಮೀಪದ ನಾನಿಲ್ಪಳ್ಳ ನಿವಾಸಿ ನಾರಾಯಣನ್ ಅವರ ಪುತ್ರ ರಾಮಚಂದ್ರ (40) ಗಾಯಗೊಂಡವರು. ಅವರನ್ನು ಕುಂಬಳೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ಸಂಜೆ ಸುಮಾರು 6 ಗಂಟೆಗೆ ಸೀತಾಂಗೋಳಿ ಪಟ್ಟಣದ ಸರ್ಕಲ್ ಸಮೀಪ ಅಪಘಾತ ಸಂಭವಿಸಿದೆ. ಬದಿಯಡ್ಕ ಕಡೆಯಿಂದ ಸೀತಾಂಗೋಳಿ ಕಡೆಗೆ ಸಂಚರಿಸುತ್ತಿದ್ದ ಸ್ಕೂಟರ್‌ಗೆ ಪೆರ್ಲ ಕಡೆಯಿಂದ ಅತಿವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ರಾಮಚಂದ್ರ ಅವರ ಎಡಗಾಲಿನ ಮೂಳೆ ಮುರಿದಿದೆ. ಘಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

0 Comments