ಕಾಸರಗೋಡು ಸಂಯುಕ್ತ ಜಮಾಅತ್ ಖಾಝಿ ಹಾಗೂ ಸಮಸ್ತದ ಪ್ರಧಾನ ಕಾರ್ಯದರ್ಶಿ ಪಿ.ಪಿ. ಉಮರ್ ಮುಸ್ಲಿಯಾರ್ ಕೊಯ್ಯೋಡ್ ಧ್ವಜಾರೋಹಣ ನೆರವೇರಿಸಿ ಪ್ರಾರ್ಥನೆಗೆ ನೇತೃತ್ವ ನೀಡಿದರು. ಶಾಸಕ ಕಲ್ಲಟ್ರ ಮಾಯಿನ್ ಹಾಜಿ ಕಾರ್ಯಕ್ರಮ ಉದ್ಘಾಟಿಸಿದರು.
ಮಾಲಿಕ್ ದೀನಾರ್ ದೊಡ್ಡ ಜುಮಾ ಮಸೀದಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್ ರಹಮಾನ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಸಂಯುಕ್ತ ಜಮಾಅತ್ ಅಧ್ಯಕ್ಷ ಎನ್.ಎ. ನೆಲ್ಲಿಕುನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಖ್ಯಾತ ಗಾಯಕ ರಶೀದ್ ಮೊಂಗಂ ಮುಖ್ಯ ಭಾಷಣ ಮಾಡಿದರು.
ನಗರಸಭೆ ಉಪಾಧ್ಯಕ್ಷ ಕೆ.ಎಂ. ಹನೀಫ್, ಕೆ.ಎ. ಮೊಹಮ್ಮದ್ ಬಶೀರ್, ಟಿ.ಎ. ಶಾಫಿ, ಕೆ.ಎಂ. ಅಬ್ದುರಹಮಾನ್, ಪಿ.ಎ. ಸತ್ತಾರ್ ಹಾಜಿ, ಕೆ.ಎಂ. ಬಶೀರ್, ಕೆ.ಎಚ್. ಮೊಹಮ್ಮದ್ ಅಶ್ರಫ್, ಎನ್.ಕೆ. ಅಮಾನುಲ್ಲ, ಟಿ.ಎಸ್. ಬಶೀರ್, ಮೊಹಮ್ಮದ್ ಹಾಜಿ ವೆಲ್ಕಂ, ಹಸೈನಾರ್ ಹಾಜಿ ತಳಂಗರೆ, ಟಿ.ಇ. ಮುಖ್ತಾರ್, ಜಹೀರ್ ಆಸಿಫ್, ಕೆ.ಎಂ. ಅಬ್ದುಲ್ಲ ಹಾಜಿ, ಸಿದ್ದೀಕ್ ಚಕ್ಕರ, ಅಫ್ಸಲ್ ಫೈಝಿ ಹಾಗೂ ಇಬ್ರಾಹಿಂ ಹುದವಿ ಬೆಳಿಂಜ ಉಪಸ್ಥಿತರಿದ್ದರು.
ಪ್ರಾಂಶುಪಾಲ ಅಬ್ದುಲ್ ಬಾರಿ ಹುದವಿ ಸ್ವಾಗತಿಸಿ, ನೌಫಲ್ ಹುದವಿ ಕೊಡವಳ್ಳಿ ವಂದಿಸಿದರು.
ಪೂಲ್ ಎ ವಿಭಾಗದ ಹತ್ತು ಶಿಕ್ಷಣ ಸಂಸ್ಥೆಗಳಿಂದ 500ಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪಿಲಿಕುಂಜೆಯಿಂದ ತಳಂಗರೆವರೆಗೆ ವರ್ಣರಂಜಿತ ರ್ಯಾಲಿಯೂ ನಡೆಯಿತು.

0 Comments