Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪತ್ನಿಯಿಂದ ತೆರವಾದ ಮುಖ್ಯೋಪಾಧ್ಯಾಯಹುದ್ದೆಗೆ ಪತಿಯೇ ಉತ್ತರಾಧಿಕಾರಿ!

ಕುಂಬಳೆ: ಸಾಮಾನ್ಯವಾಗಿ ವರ್ಗಾವಣೆ ಎಂದರೆ ಹುದ್ದೆ ಬದಲಾವಣೆ, ಹೊಸ ಶಾಲೆ, ಹೊಸ ಜವಾಬ್ದಾರಿ. ಆದರೆ ಇಲ್ಲೊಂದು ವರ್ಗಾವಣೆ ಮಾತ್ರ ವಿಶೇಷ ಕಾರಣಕ್ಕೆ ಗಮನ ಸೆಳೆದಿದೆ. ಮಕ್ಕಳ ಪ್ರೀತಿಯ ಮುಖ್ಯೋಪಾಧ್ಯಾಯಿನಿಯಾಗಿ ಗುರುತಿಸಿಕೊಂಡಿದ್ದ ಪತ್ನಿ ವರ್ಗಾವಣೆಯಾಗಿ ತೆರಳುತ್ತಿದ್ದಂತೆ, ಅವರು ನಿರ್ವಹಿಸುತ್ತಿದ್ದ ಅದೇ ಶಾಲೆಯ ಮುಖ್ಯೋಪಾಧ್ಯಾಯ ಹುದ್ದೆಗೆ ಪತಿಯೇ ಭಡ್ತಿಯೊಂದಿಗೆ ನೇಮಕಗೊಂಡ ಅಪರೂಪದ ಘಟನೆ ಕುಂಬಳೆ ಉಪಜಿಲ್ಲಾ ಶೈಕ್ಷಣಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.

ಮೊಗ್ರಾಲ್ ಪುತ್ತೂರು ಜಿಯುಪಿ ಶಾಲೆಯ ಪ್ರಧಾನ ಅಧ್ಯಾಪಿಕೆಯಾಗಿದ್ದ ಸುರೇಖಾ ಕಾಟಕುಕ್ಕೆ ಅವರಿಗೆ ಮಂಗಲ್ಪಾಡಿ ಜಿಎಚ್‌ಡಬ್ಲ್ಯೂಎಲ್‌ಪಿ ಶಾಲೆಯ ಪ್ರಧಾನ ಅಧ್ಯಾಪಕಿಯಾಗಿ ವರ್ಗಾವಣೆಯಾಗಿದೆ. ಇದರಿಂದ ತೆರವಾದ ಮೊಗ್ರಾಲ್ ಪುತ್ತೂರು ಶಾಲೆಯ ಮುಖ್ಯೋಪಾಧ್ಯಾಯ ಹುದ್ದೆಗೆ ಅವರ ಪತಿ, ಅಧ್ಯಾಪಕ ಶಿವರಾಮ್ ಕಾಟುಕುಕ್ಕೆ ಅವರು ಭಡ್ತಿಯೊಂದಿಗೆ ನೇಮಕಗೊಂಡಿದ್ದಾರೆ.

ನಿಯಮಾನುಸಾರ ನಡೆದ ಆಯ್ಕೆ ಪ್ರಕ್ರಿಯೆಯ ಫಲಿತಾಂಶವಾಗಿದ್ದರೂ, ಈ ನೇಮಕಾತಿಯಲ್ಲಿರುವ ಕಾಕತಾಳೀಯವೇ ಎಲ್ಲರ ಗಮನ ಸೆಳೆದಿದೆ. ಹಲವು ವರ್ಷಗಳಿಂದ ಮಕ್ಕಳೊಂದಿಗೆ ಆತ್ಮೀಯ ಬಾಂಧವ್ಯ ಬೆಳೆಸಿಕೊಂಡು, ಪ್ರೀತಿಯ ಮುಖ್ಯೋಪಾಧ್ಯಾಯಿನಿಯಾಗಿ ಗುರುತಿಸಿಕೊಂಡಿದ್ದ ಪತ್ನಿ ತೆರಳಿದ ಸ್ಥಾನಕ್ಕೆ ಇದೀಗ ಪತಿಯೇ ಬಂದು ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಪತ್ನಿ ನಿರ್ವಹಿಸುತ್ತಿದ್ದ ಹುದ್ದೆಯನ್ನು ಪತಿಯೇ ಸ್ವೀಕರಿಸುವ ಮೂಲಕ ಶಾಲೆಯ ಆಡಳಿತದ ಜವಾಬ್ದಾರಿ ದಂಪತಿಯ ನಡುವೆಯೇ ಹಸ್ತಾಂತರಗೊಂಡಂತಾಗಿದೆ. ಹುದ್ದೆ ಹಸ್ತಾಂತರದ ಈ ಅಪರೂಪದ ಕ್ಷಣ ಅಧ್ಯಾಪಕ ವಲಯದಲ್ಲಿ ರಸಮಯ ಚರ್ಚೆಗೆ ಕಾರಣವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಗಮನ ಸೆಳೆದಿದೆ.

ಶಿವರಾಮ್ - ಸುರೇಖ ದಂಪತಿಗಳು ಬಹು ಕಲಾವಲ್ಲಭರಾಗಿ ಚಿರಪರಿತರು. ಶಿವರಾಮ್ ಕಾಟುಕುಕ್ಕೆ ಅವರು ಯಕ್ಷಗಾನ, ನಾಟಕ ಕಲಾವಿದರು. ವಿದ್ಯಾಭ್ಯಾಸ ರಂಗದ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಸುರೇಖಾ ಟೀಚರ್ ನೃತ್ಯ, ಅಭಿನಯ ಹಾಗೂ ಸಾಹಿತ್ಯ ರಂಗದ ಆಸಕ್ತರಾಗಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement