ಕುಂಬಳೆ : ಕಳೆದ ಬುಧವಾರ ಸಂಜೆ ಪುತ್ತಿಗೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅಸ್ಪತ್ರೆ ಸೇರಿದ್ದ ರಿಕ್ಷಾ ಸವಾರೋರ್ವರು ಚಿಕಿತ್ಸೆ ಫಲಿಸದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರು ಪುತ್ತಿಗೆ ಸಮೀಪದ ಕಮ್ಮಂತಿಲ ಮೆಹಮ್ಮೂದ್ (78) ಎಂದು ಗುರುತಿಸಲಾಗಿದೆ. ಕಳೆದ ಬುಧವಾರ ಸಂಜೆ ಸೀತಾಂಗೋಳಿಯಿಂದ ಪೆರ್ಲಕ್ಕೆ ಬರುತ್ತಿದ್ದ ಖಾಸಗಿ ಬಸ್ ಮೃತರು ಸಂಚರಿಸುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ರಿಕ್ಷಾ ಚಾಲಕ ಹಾಗೂ ಸವಾರರು ಗಂಭೀರ ಗಾಯಗೊಂಡು ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೆಹಮೂದ್ ನಿಧನರಾಗಿದ್ದಾರೆ. ಕೃಷಿಕರಾಗಿದ್ದ ಇವರು ಈ ಹಿಂದೆ ಮುಂಬಯಿಯಲ್ಲಿ ವ್ಯಾಪಾರ ನಡೆಸುತ್ತಿದ್ದು ಬೊಂಬೆ ಮೊಹಮ್ಮಚ್ಚ ಎಂದು ಇವರು ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಕುಞೂಲಿಯಮ್ಮ ನಾಲ್ಕು ಗಂಡು ನಾಲ್ಕು ಹೆಣ್ಣು ಮಕ್ಕಳನ್ನಗಲಿದ್ದಾರೆ. ಇವರ ನಿಧನಾರ್ಥ ನಾಗರಿಕರು ಪುತ್ತಿಗೆ ಪರಿಸರದಲಿ ಶೋಕಾಚರಣೆ ನಡೆಸುತ್ತಿದ್ದು ನಾಗರಿಕರು ಬಸ್ ಸಂಚಾರಕ್ಕೆ ತಡೆಯೊಡ್ಡಿದರು ಈ ವೇಳೆ ಅಲ್ಪ ಸಂಘರ್ಷ ಸ್ಥಿತಿ ನಿರ್ಮಾಣವಾಗಿದ್ದು ಕುಂಬಳೆ ಪೋಲಿಸರು ಪರಿಸ್ಥಿತಿ ನಿಯಂತ್ರಿಸಿದರು. ಇದೀಗ ಬಸ್ ಮಾಲಕರ ತೀರ್ಮಾನದಂತೆ ಬಸ್ ಸಂಚಾರ ಮೊಟಕುಗೊಳಿಸಿ ಸಂತಾಪ ವ್ಯಕ್ತಪಡಿಸಲಾಗಿದೆ. ಅಲ್ಪ ಕಾಲದ ತಟಸ್ಥ ದ ಬಳಿಕ ಬಸ್ ಓಡಾಟ ಇದೀಗ ನಡೆಯುತ್ತಿದೆ ಎಂದು ನಾಗರಿಕರು ತಿಳಿಸಿದ್ದಾರೆ.

0 Comments