Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ತೆರಿಗೆ ಪಾವತಿಸದೆ ಕೇರಳಕ್ಕೆ ಬಂದ ಕರ್ನಾಟಕ ನೋಂದಣಿಯ ಪ್ರವಾಸಿ ಬಸ್‌ಗಳು ವಶಕ್ಕೆ; 8.57 ಲಕ್ಷ ರೂ. ದಂಡ

ಕಾಸರಗೋಡು: ತೆರಿಗೆ ಪಾವತಿಸದೆ ಕೇರಳಕ್ಕೆ ಪ್ರವೇಶಿಸಿ ಸಂಚರಿಸುತ್ತಿದ್ದ ಕರ್ನಾಟಕ ನೋಂದಣಿಯ ಐದು ಪ್ರವಾಸಿ ಬಸ್‌ಗಳನ್ನು ಮೋಟಾರು ವಾಹನ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕರ್ನಾಟಕದಿಂದ ಪ್ರವಾಸಿಗರನ್ನು ಹೊತ್ತುಕೊಂಡು ಕೇರಳಕ್ಕೆ ಬಂದಿದ್ದ ಬಸ್‌ಗಳನ್ನು ರಹಸ್ಯ ಮಾಹಿತಿಯ ಆಧಾರದಲ್ಲಿ ನಡೆಸಿದ ತಪಾಸಣೆಯ ವೇಳೆ ಬೇಕಲ ಕೋಟೆ ಸಮೀಪ ಪತ್ತೆಹಚ್ಚಲಾಗಿದೆ.

ಕೇರಳಕ್ಕೆ ಪ್ರವೇಶಿಸುವ ಕಾಂಟ್ರಾಕ್ಟ್ ಕ್ಯಾರೇಜ್ ವಾಹನಗಳು ರಾಜ್ಯದಲ್ಲಿ ಪಾವತಿಸಬೇಕಾದ ತೆರಿಗೆಯನ್ನು ಆನ್‌ಲೈನ್ ಮೂಲಕ ಪಾವತಿಸಿದ ಬಳಿಕವೇ ಸಂಚಾರ ನಡೆಸಬೇಕು. ತೆರಿಗೆ ಪಾವತಿಸದಿದ್ದಲ್ಲಿ ವಾಹನದ ಪರವಾನಗಿ ಮಾನ್ಯವಾಗಿರುವುದಿಲ್ಲ. ಇಂತಹ ವಾಹನಗಳು ಅಪಘಾತಕ್ಕೀಡಾದರೆ ಪ್ರಯಾಣಿಕರು ಹಾಗೂ ವಾಹನಗಳಿಗೆ ವಿಮಾ ರಕ್ಷಣೆಯೂ ಲಭಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೆರಿಗೆ ಪಾವತಿಸದ ಐದು ಬಸ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ತೆರಿಗೆ ಮತ್ತು ದಂಡ ಸೇರಿದಂತೆ ಒಟ್ಟು 8,57,500 ರೂ. ಪಾವತಿಸಿದ ಬಳಿಕ ವಾಹನಗಳನ್ನು ಬಿಡುಗಡೆ ಮಾಡಲಾಗಿದೆ.

ಎನ್‌ಫೋರ್ಸ್‌ಮೆಂಟ್ ಆರ್‌ಟಿಒ ಕೆ.ಎ. ರಾಜು ಅವರ ನಿರ್ದೇಶನದಂತೆ ಎಂವಿಐ ಕೆ. ದಿನೇಶನ್, ಎಎಂವಿಐ ಹಾರಿಸ್ ಇ.ಪಿ. ಹಾಗೂ ಚಾಲಕ ಮನೋಜ್ ಕುಮಾರ್ ಕೆ. ತಪಾಸಣೆಗೆ ನೇತೃತ್ವ ವಹಿಸಿದ್ದರು.

ಮಂಡಲ ಮಾಸ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ತಪಾಸಣೆಗಳನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಲಾಗುವುದು ಎಂದು ಆರ್‌ಟಿಒ ತಿಳಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement