Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಉಪಜಿಲ್ಲಾ ಕಲೋತ್ಸವದಲ್ಲಿ ಶೇಣಿ ಶ್ರೀ ಶಾರದಾಂಬ ಶಾಲಾ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ; ಶಾಲಾ ಪರಿಸರದಲ್ಲಿ ವಿಜಯೋತ್ಸವ ಮೆರವಣಿಗೆ

ಪೆರ್ಲ : ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಶೇಣಿ ಶ್ರೀ ಶಾರದಾಂಬ ಎಯುಪಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಕನ್ನಡ ಕಲೋತ್ಸವದ ಎಲ್‌ಪಿ ವಿಭಾಗದಲ್ಲಿ ಚಾಂಪಿಯನ್ ಪಟ್ಟ, ಎಲ್‌ಪಿ ಜನರಲ್ ವಿಭಾಗದಲ್ಲಿ ರನ್ನರ್ ಅಪ್ ಹಾಗೂ ಯುಪಿ ಜನರಲ್ ವಿಭಾಗದಲ್ಲಿ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಕಲೋತ್ಸವದ ವಿವಿಧ ಸ್ಪರ್ಧೆಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ವೈಯಕ್ತಿಕ ಪ್ರಶಸ್ತಿಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. 3ನೇ ತರಗತಿಯ ಅನ್ವಿ ಅಲೆಟಾ ಕ್ರಾಸ್ತ ಇಂಗ್ಲಿಷ್ ರಿಸಿಟೇಶನ್‌ನಲ್ಲಿ ಪ್ರಥಮ ಸ್ಥಾನ, 7ನೇ ತರಗತಿಯ ರಿಝಾ ಫಾತಿಮಾ ಉರ್ದು ಕ್ವಿಜ್‌ನಲ್ಲಿ ಪ್ರಥಮ ಸ್ಥಾನ ಹಾಗೂ 2ನೇ ತರಗತಿಯ ಮೊಹಮ್ಮದ್ ಸುಹೈಲ್ ಕನ್ನಡ ಅಭಿನಯ ಗೀತೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.ಇದಲ್ಲದೆ, ವಿಜ್ಞಾನೋತ್ಸವದ ಪುಸ್ತಕ ಬೈಂಡಿಂಗ್ ಸ್ಪರ್ಧೆಯಲ್ಲಿ 6ನೇ ತರಗತಿಯ ತಸ್ಮೈ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿದ್ಯಾರ್ಥಿಗಳ ಈ ಗಮನಾರ್ಹ ಸಾಧನೆಯನ್ನು ಅಭಿನಂದಿಸಿ ಶಾಲಾ ವತಿಯಿಂದ ಶಾಲಾ ಪರಿಸರದಲ್ಲಿ ಸಂಭ್ರಮದ ವಿಜಯೋತ್ಸವ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್ ಶೇಣಿ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಪೆರ್ದನೆ, ಶಾಲಾ ಪ್ರಬಂಧಕಿ ಶಾರದಾ ವೈ. ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

Post a Comment

0 Comments

ಜಾಹೀರಾತು

Responsive Advertisement