Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕನ್ನಡತಿ ಸವಿತಾ ಪುಂಡೂರು ಕಾಸರಗೋಡು ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರಾಗಿ ನೇಮಕ


ಕಾಸರಗೋಡು:
 ಕಾಸರಗೋಡು ಜಿಲ್ಲಾ  ಶಿಕ್ಷಣ ಉಪನಿರ್ದೇಶಕರಾಗಿ  ಕನ್ನಡತಿ ಸವಿತಾ ಪುಂಡೂರು ಅವರು ಭಡ್ತಿಯೊಂದಿಗೆ ನೇಮಕಗೊಂಡಿದ್ದಾರೆ. ಈ ಹಿಂದೆ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ನವೆಂಬರ್ 13ರಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

1997ರಲ್ಲಿ ಅಧ್ಯಾಪಕಿಯಾಗಿ ವೃತ್ತಿಜೀವನ ಆರಂಭಿಸಿದ ಸವಿತಾ ಅವರು ಉಪ್ಪಳ, ಕುಂಬಳೆ, ಮೊಗ್ರಾಲ್ ಪುತ್ತೂರು ಹಾಗೂ ಇಡುಕ್ಕಿ ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ. ಬಳಿಕ ಸಹಾಯಕ ಶಿಕ್ಷಣಾಧಿಕಾರಿಯಾಗಿ ನೇಮಕಗೊಂಡು ಶಿಕ್ಷಣ ಇಲಾಖೆಯಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಇದೀಗ ಭಡ್ತಿಯೊಂದಿಗೆ ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಇವರು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ನಿವೃತ್ತ ಗಣಿತ ಅಧ್ಯಾಪಕ ಹಾಗೂ ಕಲಾವಿದ ಕೃಷ್ಣರಾಜ ಪುಣಿಂಚಿತ್ತಾಯ ಮತ್ತು ಬಿಇಎಂ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕಿ ರತ್ನಾವತಿ ಟೀಚರ್ ದಂಪತಿಯ ಪುತ್ರಿ. ಕೇರಳದ ನಿವೃತ್ತ ನ್ಯಾಯಾಧೀಶ ವಿಠಲ ರಾಜಕುಮಾರ್ ಅವರ ಪತ್ನಿಯಾಗಿರುವ ಸವಿತಾ ಅವರು ಪ್ರಸ್ತುತ ಮಧೂರಿನಲ್ಲಿ ವಾಸವಾಗಿದ್ದಾರೆ.


Post a Comment

0 Comments

ಜಾಹೀರಾತು

Responsive Advertisement