Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮಜಿಬೈಲಿನಲ್ಲಿ ತಾರಸಿನ ಮೇಲಿನಿಂದ ಆಯ ತಪ್ಪಿ ಕೆಳಕ್ಕೆ ಬಿದ್ದು ಕಿದೂರಿನ ಸೆಂಟ್ರಿಂಗ್ ಕಾರ್ಮಿಕ ನಿಧನ


ಕುಂಬಳೆ: ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದ ಸೆಂಟ್ರಿಂಗ್  ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಮಜಿಬೈಲು ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿ ಕುಂಬಳೆ ಕಿದೂರು ಪಾದೆಕ್ಕಲ್ಲು ನಿವಾಸಿ, ದಿ. ಬಾಬು ಪೂಜಾರಿ ಅವರ ಪುತ್ರ ಸುರೇಶ್ (49) ಎಂದು ಗುರುತಿಸಲಾಗಿದೆ.

ಸೋಮವಾರ ಸಂಜೆ ಮಂಜೇಶ್ವರದ  ಮಜಿಬೈಲು ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೆಲಸ ಮಾಡುತ್ತಿದ್ದ ವೇಳೆ ಕಾಲು ಜಾರಿ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡ ಸುರೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತರು ತಾಯಿ ಗಿರಿಜಾ, ಪತ್ನಿ ದಿವ್ಯಾ, ಪುತ್ರಿ ಆರೂಷಿ ಹಾಗೂ  ಸಹೋದರರಾದ ಮಹಾಲಿಂಗ, ಅಶೋಕ, ನಾರಾಯಣ, ಕೃಷ್ಣ ಹಾಗೂ ಸಹೋದರಿ ಶಾರದಾ ಅವರನ್ನು ಅಗಲಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement