ಹೊಸಂಗಡಿ: ಯುಡಿಎಫ್ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಎಲ್‌ಡಿಎಫ್ ಮಂಜೇಶ್ವರ ಮಂಡಲ ಸಮಿತಿಯ ನೇತೃತ್ವದಲ್ಲಿ ಹೊಸಂಗಡಿಯಲ್ಲಿ ಜನಕೀಯ ಸಂಗಮ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಎಲ್‌ಡಿಎಫ್ ಕಾಸರಗೋಡು ಜಿಲ್ಲಾ ಕನ್ವೀನರ್ ಕೆ.ಪಿ. ಸತೀಶ್ ಚಂದ್ರನ್ ಉದ್ಘಾಟಿಸಿದರು. ಜಯರಾಮ ಬಳ್ಳಂಗುಡೆಲ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ರಾಮಕೃಷ್ಣ ಕಡಂಬಾರ್, ಅಹಮದಾಲಿ ಕುಂಬ್ಳೆ, ರಘುದೇವ್ ಮಾಸ್ಟರ್, ಸುಬ್ಬಣ್ಣ ಆಳ್ವ, ಸುಬೈರ್ ಕುಂಬ್ಳೆ ಮೊದಲಾದವರು ಉಪಸ್ಥಿತರಿದ್ದರು. ಕೆ.ಆರ್. ಜಯಾನಂದ ಸ್ವಾಗತಿಸಿದರು.

0 Comments