ಕಾಸರಗೋಡು: ಕಾಸರಗೋಡು ಕಸಬ ಗ್ರಾಮದ ಕರಂದಕ್ಕಾಡ್‌ನಲ್ಲಿ ಬ್ಯಾಗ್‌ನಲ್ಲಿ ಸಂಗ್ರಹಿಸಿಟ್ಟಿದ್ದ 1.51ಗ್ರಾಂ ಎಂಡಿಎಂಎ ಸಹಿತ ಪಳ್ಳಿಕ್ಕರ ಪಳ್ಳಿಪುಳ ನಿವಾಸಿ ಗೋಕುಲ್ ರಾಜೀವ್ (25) ಎಂಬಾತನನ್ನು ಬಂಧಿಸಲಾಗಿದೆ. ನವೆಂಬರ್ 7ರಂದು ಮಧ್ಯಾಹ್ನ 3.45ರ ಸುಮಾರಿಗೆ ಘಟನೆ ನಡೆದಿದೆ.
ಜಿಲ್ಲಾ ಡ್ಯಾನ್ಸಾಫ್ (DANSAF) ತಂಡದ ಸದಸ್ಯ ಹಾಗೂ ವಿದ್ಯಾನಗರ ಸಬ್ ಇನ್‌ಸ್ಪೆಕ್ಟರ್ ವಿಜಯನ್ ಮೇಲತ್ ಮತ್ತು ತಂಡದವರು ಮತ್ತೊಂದು ಪ್ರಕರಣದ ತನಿಖೆ ಮುಗಿಸಿ ಮರಳುತ್ತಿದ್ದಾಗ ಸಂಶಯಾಸ್ಪದವಾಗಿ ಕಂಡ ಯುವಕನನ್ನು ತಡೆದು ಪರಿಶೀಲಿಸಿದ್ದಾರೆ. ಈ ವೇಳೆ ಮಾರಾಟ ಮತ್ತು ಬಳಕೆಗಾಗಿ ಬ್ಯಾಗ್‌ನಲ್ಲಿ ಇರಿಸಿದ್ದ ಎಂಡಿಎಂಎ ಪತ್ತೆಯಾಗಿದೆ. ಕಾಸರಗೋಡು ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

0 Comments