Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ರೈಲು ಡಿಕ್ಕಿಯಾಗಿ ಕಾಸರಗೋಡು ಜಿಲ್ಲಾ ಪಂಚಾಯತ್ ಹಿರಿಯ ಕ್ಲರ್ಕ್ ಸಾವು

ಕಾಸರಗೋಡು: ಕಾಸರಗೋಡು ಜಿಲ್ಲಾ ಪಂಚಾಯತ್ ಉದ್ಯೋಗಿಯೊಬ್ಬರು ರೈಲು ಡಿಕ್ಕಿಯಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಪಯ್ಯನ್ನೂರು ಕಂಡೋತ್ ನಿವಾಸಿ ಎಂ.ವಿ. ಅನೂಪ್ (41) ಮೃತಪಟ್ಟವರು. ಇವರು ಕಾಸರಗೋಡು ಜಿಲ್ಲಾ ಪಂಚಾಯತ್ ಎಲ್‌ಎಸ್‌ಜಿಡಿ ವಿಭಾಗದ ಕಚೇರಿಯಲ್ಲಿ ಹಿರಿಯ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹಿಂದೆ ಬದಿಯಡ್ಕ ಗ್ರಾಮ ಪಂಚಾಯತ್‌ನಲ್ಲಿಯೂ ಸೇವೆ ಸಲ್ಲಿಸಿದ್ದರು.

ಗುರುವಾರ ರಾತ್ರಿ ಕಾಞಂಗಾಡ್‌ನ ಪಡನ್ನಕ್ಕಾಡ್ ಮುಲ್ಲಪಳ್ಳಿಯಲ್ಲಿ ರೈಲು ಡಿಕ್ಕಿಯಾಗಿ ಮೃತಪಟ್ಟ ಸ್ಥಿತಿಯಲ್ಲಿ ಇವರನ್ನು ಪತ್ತೆಹಚ್ಚಲಾಗಿದೆ. ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಹೊಸದುರ್ಗ ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡರು. ಮೃತದೇಹವನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.

ಮೂಲಕ್ಕೊವ್ವಲ್ ಚಂದ್ರನ್ ಮತ್ತು ಮೀತ್ತಲೆ ಮನೆಯ ಸಾವಿತ್ರಿ ದಂಪತಿಯ ಪುತ್ರರಾಗಿರುವ ಅನೂಪ್ ಪತ್ನಿ ರಾಜಲಕ್ಷ್ಮಿ ಹಾಗೂ ಮಕ್ಕಳಾದ ಅಥೀನಾ, ಏದನ್ ಮತ್ತು ಸಹೋದರಿ ದೀಪ ಅವರನ್ನು ಅಗಲಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement