ಕಾಸರಗೋಡು: ನೀಲೇಶ್ವರ ಕೋಟಪ್ಪುರ ಸೇತುವೆ ಸಮೀಪ ಪೊಲೀಸರು ನಡೆಸಿದ ರಾತ್ರಿ ವಾಹನ ತಪಾಸಣೆ ವೇಳೆ 1.5ಗ್ರಾಂ ಎಂಡಿಎಂಎ ಸಹಿತ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಹೊಸದುರ್ಗ ಸದ್ದಾಂಮುಕ್ಕು ನಿವಾಸಿ ಆಶಿಕ್ ಕೆ. (33) ಮತ್ತು ಒಳಿತವಳಪ್ಪು ಪುಂಚಾವಿ ನಿವಾಸಿ ಸಲಾಂ ಖಲೀಲ್ (41) ಬಂಧಿತರು.
ನವೆಂಬರ್ 6ರಂದು ರಾತ್ರಿ ವೇಗವಾಗಿ ಬಂದ ಸ್ಕೂಟರ್‌ಗೆ ಪೊಲೀಸರು ತಡೆ ಸೂಚನೆ ನೀಡಿದರೂ ಸವಾರರು ಹಿಂದಕ್ಕೆ ತೆರಳಲು ಯತ್ನಿಸಿದ್ದರು. ಬಳಿಕ ನಡೆಸಿದ ತಪಾಸಣೆ ವೇಳೆ ಸಲಾಂನ ಪ್ಯಾಂಟ್ ಜೇಬಿನಲ್ಲಿ ಎಂಡಿಎಂಎ ಪತ್ತೆಯಾಗಿದೆ. ಮಾದಕ ವಸ್ತು ಸಾಗಾಟಕ್ಕೆ ಬಳಸಿದ್ದ ಸ್ಕೂಟರ್‌ನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 22(b) ಮತ್ತು 29ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಮಾದಕ ವಸ್ತುಗಳ ಜಾಲದ ವಿರುದ್ಧ ತೀವ್ರ ನಿಗಾ ಮತ್ತು ತಪಾಸಣೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

0 Comments