ನೀರ್ಚಾಲು: ಇತ್ತೀಚೆಗೆ ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವದಲ್ಲಿ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ವೃತ್ತಿ ಪರಿಚಯ ಮೇಳದ ಎಂಬ್ರಾಯ್ಡರಿ ಸ್ಪರ್ಧೆಯಲ್ಲಿ ಹನ್ಶಿಕಾ, ಸ್ಟಫ್ಡ್ ಟಾಯ್ಸ್ ಸ್ಪರ್ಧೆಯಲ್ಲಿ ದೀಪಶಿಖಾ ಹಾಗೂ ಗಣಿತ ಮೇಳದ ನಂಬರ್ ಚಾರ್ಟ್ ಸ್ಪರ್ಧೆಯಲ್ಲಿ ಅವಿಶ್ ಪ್ರಥಮ ಸ್ಥಾನವನ್ನು ಗಳಿಸಿ ಶಾಲೆಯ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ರಕ್ಷಕ-ಶಿಕ್ಷಕ ಸಂಘ ಅಭಿನಂದಿಸಿದ್ದಾರೆ.

0 Comments