Ticker

6/recent/ticker-posts

Ad Code

ಅಧಿಕ ತಾಪಮಾನ, ಕಾಸರಗೋಡು ಸಹಿತ 9 ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಎಲ್ಲೋ ಅಲರ್ಟ್


 ತಿರುವನಂತಪುರಂ: ರಾಜ್ಯದಲ್ಲಿ ತಾಪಮಾನ ಏರಿಕೆ ಅಪಾಯಕಾರಿ ರೀತಿಯಲ್ಲಿ ಸಾಗುತ್ತಿದೆಯೆಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು (ಮಂಗಳವಾರ) ಹಾಗೂ ನಾಳೆ ವಿವಿದ ಜಿಲ್ಲೆಗಳಲ್ಲಿ 2 ಡಿಗ್ರಿವರೆಗೆ ತಾಪಮಾನ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 9 ಜಿಲ್ಲೆಗಳಲ್ಲಿ ಇಂದು ಹಾಗೂ ನಾಳೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಾಸರಗೋಡು, ಕಣ್ಣೂರು, ಕೋಜಿಕ್ಕೋಡ್, ಮಲಪ್ಪುರಂ, ಪಾಲಕ್ಕಾಡ್, ತ್ರಿಶೂರ್, ಕೊಟ್ಟಯಂ, ಆಲಪ್ಪುಯ, ಕೊಲ್ಲಂ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ತಾಪಮಾನ 36 ಡಿಗ್ತಿಗಿಂತಲೂ ಅಧಿಕವಾಗುವ ಸಾಧ್ಯತೆಯಿದೆಯೆಂದು ಸಹ ಹವಾಮಾನ ಇಲಾಖೆ ತಿಳಿಸಿದೆ. ಬೆಳಗ್ಗೆ 11 ರಿಂದ 3 ಗಂಟೆಯ ವರೆಗೆ ಅನಿವಾರ್ಯ ಕೆಲಸಗಳನ್ನು ಹೊರತುಪಡಿಸಿ ಬಿಸಿಲು ತಾಗದಂತೆ ಎಚ್ಚರ ವಹಿಸಬೇಕು ಎಂದಿ ಹವಾಮಾನ ಇಲಾಖೆ ತಿಳಿಸಿದೆ

Post a Comment

0 Comments