ಬದಿಯಡ್ಕ: ನೆಲ್ಲಿಕಟ್ಟೆ ಪೈಕ ಬಳಿಯ ಚಂದ್ರಂಪಾರದಲ್ಲಿ ಶಾಫಿ ಎಂಬವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಅಪಾರ ನಾಶ ನಷ್ಟ ಉಂಟಾಯಿತು.
ಬುದವಾರ ರಾತ್ರಿ 11.30 ರ ವೇಳೆ ಘಟನೆ ನಡೆದಿದೆ. ಅಡುಗೆ ಕೋಣೆಯಲ್ಲಿರುವ ಫ್ರಿಡ್ಜ್ ನಿಂದ ಬೆಂಕಿ ಇತರ ಕಡೆಗೆ ಹರಡಿತೆಂದು ಶಾಫಿ ಹೇಳಿದ್ದಾರೆ.
ಅಡಿಗೆ ಕೋಣೆಯಲ್ಲಿದ್ದ ವಾಶಿಂಗ್ ಮೆಶೀನ್, ಗ್ರೈಂಡರ್, ಸ್ಟೌ, ಇತರ ಪಾತ್ರೆಗಳು ಎಂಬಿವು ಹೊತ್ತಿ ನಾಶವಾಗಿವೆ. ಮನೆಯವರು ನೀಡಿದ ಮಾಹಿತಿಯ ಹಿನ್ನೆಲೆಯಲ್ಲಿ ಕಾಸರಗೋಡು ಅಗ್ನಿಶಾಮಕ ದಳ ಅಧಿಕಾರಿಗಳು ಆಗಮಿಸಿ ಬೆಂಕಿ ನಂದಿಸಿದರು.
ಅಗ್ನಿಶಾಮಕ ದಳದ ಅಸಿಸ್ಟೆಂಟ್ ಸ್ಟೇಶನ್ ಹೌಸ್ ಆಫೀಸರ್ ಎಂ.ಕೆ ರಾಜೇಶ್ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳಾದ ವಿ.ಎಂ.ಸತೀಶನ್, ಜೀವನ್, ಅರುಣ್, ಜಿತ್ತು, ಸಿದಾಜ್, ಸಬಿಲ್, ಪ್ರವೀಣ್ ಮೊದಲಾದವರು ಬೆಂಕಿ ನಂದಿಸಲು ಸಹಕರಿಸಿದರು
0 Comments