ಮಾದಕವಸ್ತು ಮಾರಾಟ ಸಂಘವು ಯುವಕನನ್ನು ಪತ್ನಿಯ ಕಣ್ಮುಂದೆಯೇ ಇರಿದು ಕೊಲೆಗೈದ ಘಟನೆ ನಡೆದಿದೆ. ತ್ರಿಶೂರು, ಕುನ್ನಂಕುಳಂ ಪೆರುಂಬಿಲಾವ್ ನಿವಾಸಿ, ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಅಕ್ಷಯ್(27) ಮೃತಪಟ್ಟ ವ್ಯಕ್ತಿ. ಶುಕ್ರವಾರ ರಾತ್ರಿ 8.30 ರ ವೇಳೆ ಈ ಘಟನೆ ನಡೆದಿದೆ.
ಅಕ್ಷಯ್ ಹಾಗೂ ಪತ್ನಿ ಮನೆಗೆ ಬಂದಾಗ ಲಿಶೋಯ್, ಬಾದುಷ ಎಂಬಿವರ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಅಕ್ಷಯ್ ನ ಪತ್ನಿ ಓಡಿ ಸಮೀಪದ ಮನೆಯಲ್ಲಿ ತಿಳಿಸಿದ್ದು ಈ ವೇಳೆ ಊರವರು ಒಟ್ಟು ಸೇರಿ ಬಂದಾಗ ಆರೋಪಿಗಳು ಓಡಿ ಪರಾರಿಯಾದರು. ಸ್ಥಳೀಯ ನಾಗರುಕರು ಅಕ್ಷಯ್ ನನ್ನು ಆಸ್ಪತ್ರೆಗೆ ಸಾಗಿಸಿದರೂ ಆತ ಮೃತಪಟ್ಟಿದ್ದನು. ಅಕ್ಷಯ್ ನಿಗೆ ಇರಿದ ಬಾದುಷನಿಗೂ ಗಾಯಗಳಾಗಿದ್ದು ಆತನನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ
0 Comments