ಮಾದಕವಸ್ತು ನೀಡಿ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮಹಿಳೆಯನ್ನು ಪೋಕ್ಸೋ ಪ್ರಕರಣದಂತೆ ಬಂಧಿಸಲಾಗಿದೆ. ತಿರೂರು ಬಿ.ಪಿ.ಅಂಗಾಡಿ ನಿವಾಸು ಸಾಬಿಕ್ ಎಂಬಾತನ ಪತ್ನಿ ಸತ್ಯಭಾಮ(30) ಬಂಧಿತ ಆರೋಪಿ. ಪತಿ ಸಾಬಿಕ್ ಗೆ ತಿಳಿದೇ ಕಿರುಕುಳ ನೀಡಲಾಗಿದ್ದು ಆತನ ಹೆಸರಿನಲ್ಲಿಯೂ ಪೋಕ್ಸೊ ಕೇಸು ದಾಖಲಿಸಲಾಗಿದೆ. ಆತ ತಲೆ ಮರೆಸಿಕೊಂಡಿದ್ದಾನೆ.
2021 ರಿಂದಲೇ ಕಿರುಕುಳ ನಡೆಯುತ್ತಿದೆಯೆಂದು ತಿಳಿದು ಬಂದಿದೆ. ಬಾಲಕ 10 ನೇ ತರಗತಿ ಕಲಿಯುತ್ತಿರುವ ವೇಳೆ ಮಾದಕವಸ್ತು ನೀಡಿ ಕಿರುಕುಳ ನೀಡಲಾಗುತ್ತಿತ್ತು. ಪತಿ ಇದಕ್ಕೆ ಬೆಂಬಲ ನೀಡಿದ್ದನೆಂದೂ ಪೊಲೀಸರು ತಿಳಿಸಿದ್ದಾರೆ. ಬಾಲಕನ ನಡವಳಿಕೆಯಲ್ಲಿ ಬದಲಾವಣೆ ಕಂಡ ಹಿನ್ನೆಲೆಯಲ್ಲಿ ಮನೆಯವರು ನಡೆಸಿದ ತನಿಖೆಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ
0 Comments