ಕುಂಬಳೆ: ಹಲವು ಅಬಕಾರಿ-ಮಾದಕವಸ್ತು ಮಾರಾಟ ಪ್ರಕರಣಗಳಲ್ಲಿ ಆರೋಪಿಯಾಗಿ ತಲದಮರೆಸಿಕೊಂಡಿದ್ದ ಆರೋಪಿಯನ್ನು ಪತ್ನಿಯ ಮನೆಯಿಂದ ಕುಂಬಳೆ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಪೆರ್ಮುದೆ ಕುಡಾಲ್ ಮೇರ್ಕಳ ಬಳಿಯ ವಿಶು ಕುಮಾರ್(34) ಬಂಧಿತ ಆರೋಪಿ. ಈತನನ್ನು ಬೇಳ ದರ್ಬೆತ್ತಡ್ಕ ಬಳಿಯ ಪತ್ನಿಯ ಮನೆಯಿಂದ ಬಂಧಿಸಲಾಯಿತು. ಅಬಕಾರಿ ಅಧಿಕಾರಿಗಳು ಬಂದಾಗ ಈತ ಮಲಗುವ ಕೋಣೆಯಲ್ಲಿ ಮಂಚದಡಿಯಲ್ಲಿ ಅವಿತಿದ್ದನೆಂದು ತಿಳಿದು ಬಂದಿದೆ.
2019, 2021, 2022 ಎಂಬೀ ವರ್ಷಗಳಲ್ಲಿ ಈತನ ಹೆಸರಿನಲ್ಲಿ ಅಬಕಾರಿ ಕೇಸು ದಾಖಲಾಗಿವೆ. ಈತನನ್ನು ಬಂಧಿಸಲು ಹಲವು ಸಲ ಪ್ರಯತ್ನಿಸಿದರೂ ಯಶಸ್ವಿಯಾಗಿತಲಿಲ್ಲ. ಈ ಮಧ್ಯೆ ಈತನ ಮದುವೆ ಪೊಟೊ ಸಾಮಾಜಿಕ ಜಾಲ ತಾಣದಲ್ಲಿ ಲಭಿಸಿತು. ಅದರಂತೆ ಅಬಕಾರಿ ಅಧಿಕಾರಿಗಳು ಈತನ ಮದುವೆ ನಡೆದ ಕ್ಷೇತ್ರ, ಪತ್ನಿಯ ಮನೆಯ ಕುರಿತು ತನಿಖೆ ನಡೆಸಿದರು. ಆರೋಪಿ ಪತ್ನಿ ಮನೆಯಲ್ಲಿರುವುದಾಗಿ ಖಾತರಿ ಪಡಿಸಿಕೊಂಡ ಅಧಿಕಾರಿಗಳು ಮಂಗಳವಾರ ಸಂಜೆ ದಾಳಿ ನಡೆಸಿ ಬಂಧಿಸಿದ್ದಾರೆ.
ಅಬಕಾರಿ ಅಧಿಕಾರಿಗಳಾದ ಇನ್ಸ್ಪೆಕ್ಟರ್ ಎಂ.ಅನೀಶ್ ಕುಮಾರ್, ಕೆ.ಪೀತಾಂಬರನ್, ಎಂ.ಎಂ.ಅಖಿಲೇಶ್, ಕೆ.ಸುರ್ಜಿತ್, ಚಾಲಕ ಪ್ರವೀಣ್ ಕುಮಾರ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು
0 Comments