ಕಾಸರಗೋಡು: ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಅರ್ಪಿಸಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಮೇಣದಬತ್ತಿ ಉರಿಸಲಾಯಿತು.
ಹೊಸ ಬಸ್ಸು ನಿಲ್ದಾಣ ಪರಿಸರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ.ಎಂ.ಎಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನಿಲ್, ಸವಿತ ಟೀಚರ್, ಸಂಜೀವ ಪುಳಿಕೂರ್, ಪಿ.ರಮೇಶ್, ಪುಷ್ಪ ಗೋಪಾಲನ್, ಪ್ರಮಿಳಾ ಮಜಲ್, ವೀಣ ಅರುಣ್ ಶೆಟ್ಟಿ, ಶ್ರೀಲತ ಟೀಚರ್, ಎಂ
ಗೋಪಾಲಕೃಷ್ಣ, ರಮೇಶ್ ವಿವೇಕಾನಂದ ನಗರ್, ಶ್ರೀಧರ ಕೂಡ್ಲು, ಸುಕುಮಾರ ಕುದ್ರೆಪಾಡಿ, ಅರುಣ್ ಶೆಟ್ಟಿ ಸಹಿತ ಹಲವರು ಭಾಗವಹಿಸಿದರು
0 Comments