Ticker

6/recent/ticker-posts

Ad Code

107 ಗ್ರಾಂ ನಿಷೇಧಿತ ಎಂಡಿಎಂಎ ಸಹಿತ‌ ಪಿಲಾಂಕಟ್ಟೆ ನಿವಾಸಿ ಸೆರೆ


 ಬದಿಯಡ್ಕ: 107.090 ಗ್ರಾಂ ನಿಷೇಧಿತ ಎಂಡಿಎಂಎ ಸಹಿತ ಓರ್ವನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.‌ ಪಿಲಾಂಕಟ್ಟೆ ನಿವಾಸಿ ಮುಹಮ್ಮದ್ ರಫೀಖ್(23) ಬಂಧಿತ ಆರೋಪಿ. ರಹಸ್ಯ ಮಾಹಿತಿಯಂತೆ  ನಿನ್ನೆ (ಆದಿತ್ಯವಾರ) ಆರೊಪಿಯ ಮನೆಗೆ ಪೊಲೀಸರು ದಾಳಿ ನಡೆಸಿದಾಗ ಮಾದಕವಸ್ತು ಲಭಿಸಿತು. ಜಿಲ್ಲಾ ಪೊಲೀಸ್ ಅಧಿಕಾರಿ ಬಿ.ವಿ.ವಿಜಯ ಭರತ್ ರೆಡ್ಡಿ ಅವರ ಮಾರ್ಗದರ್ಶನದಂತೆ ವಿದ್ಯಾನಗರ ಇನ್ಸ್ಪೆಕ್ಟರ್ ವಿಪಿನ್‌.ಯು.ಪಿ. ಅವರ ಮೇಲ್ನೋಟದಲ್ಲಿ ದಾಳಿ ನಡೆದಿದೆ. ಬದಿಯಡ್ಕ ಠಾಣೆಯ ಹೆಚ್ಚುವರಿ ಕರ್ತವ್ಯ ನಿರ್ವಹಿಸಿತ್ತಿರುವ ವಿದ್ಯಾನಗರ ಎಸ್.ಐ.ಪ್ರತೀಷ್ ಕುಮಾರ್, ಬದಿಯಡ್ಕ ಠಾಣೆಯ ಇತರ ಅಧಿಕಾರಿಗಳಾದ ರೂಪೇಶ್, ರಾಧಾಕೃಷ್ಣನ್,  ನಿಜಿಲ್ ಕುಮಾರ್, ಅನಿತ ಮೊದಲಾದವರ ‌ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Post a Comment

0 Comments