ಕುಂಬಳೆ: ಆಪರೇಶನ್ ಸಿಂಧೂರ್ ಮೂಲಕ ಶತ್ರು ದೇಶ ಪಾಕಿಸ್ಥಾನಕ್ಕೆ ತಕ್ಕ ಪಾಠ ಕಲಿಸಿದ ಧೀರ ಸೈನಿಕರಿಗೆ ಅಭಿನಂದನೆಗಳನ್ನು ಸಲ್ಲಿಸಲು ಕುಂಬಳೆಯಲ್ಲಿ ತ್ರಿವರ್ಣ ಸ್ವಾಭಿಮಾನ ಯಾತ್ರೆ ನಡೆಯಿತು. ಕಾರ್ಯಕ್ರಮದಲ್ಲಿ 25 ವರ್ಷ, 17 ವರ್ಷಗಳ ಕಾಲ ಸೈನಿಕನಾಗಿ ಸೇವೆ ಸಲ್ಲಿಸಿ ನಿವೃತ್ತರಾದ ದಿನೇಶ್ ಭಟ್ ಬಾಯಾರ್, ಶಿವರಾಂ ಭಟ್ ನಾಯ್ಕಾಪು ಎಂಬಿವರನ್ನು ಸನ್ಮಾನಿಸಲಾಯಿತು.
ವಿ.ರವೀಂದ್ರನ್, ಕೋಳಾರು ಸತೀಶ್ಚಂದ್ರ ಭಂಡಾರಿ, ಸುರೇಶ್ ಕುಮಾರ್ ಶೆಟ್ಟಿ, ಸುನಿಲ್ ಅನಂತಪುರ, ರಾಧಾಕೃಷ್ಣ ರೈ ಮಧ್ವ, ಪ್ರೇಮಾವತಿ, ಸುಜಿತ್ ರೈ, ಶಿವಪ್ರಸಾದ್ ರೈ, ಸುಧಾಕರ ಕಾಮತ್, ವಿಶ್ವನಾಥ ಜಿ ಮೊದಲಾದವರು ನೇತೃತ್ವ ವಹಿಸಿದರು
0 Comments