ಬದಿಯಡ್ಕ: ಇಲ್ಲಿನ ಪಿಲಾಂಕಟ್ಟೆಯಲ್ಲಿ ಆದಿತ್ಯವಾರ ಲಕ್ಷಗಟ್ಟಲೆ ರೂ ಬೆಲೆಯ ಮಾದಕವಸ್ತು ಎಂಡಿಎಂಎ ವಶಪಡಿಸಿದ ಪ್ರಕರಣದ ಮುಖ್ಯ ಏಜಂಟ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬದಿಯಡ್ಕ ಮೂಕಂಪಾರೆ ಮೂಕಟ್ಡುಪಾರ ಹೌಸ್ ನ ಅಲಕ್ಸ್ ಚಾಕೊ(31) ಬಂಧಿತ ಆರೋಪಿ. ಈತ ವಿವಿದ ಕಡೆಗಳಿಗೆ ಎಂಡಿಎಂಎ ಪೂರೈಸುವ ಮುಖ್ಯ ಏಜಂಟ್ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಪಿಲಾಂಕಟ್ಟೆ ನಿವಾಸಿ ಮುಹಮ್ಮದ್ ರಫೀಖ್(23) ನನ್ನು ಆದಿತ್ಯವಾರ ಬಂಧಿಸಲಾಗಿತ್ತು. ಈತನ ಮನೆಯ ಮಲಗುವ ಕೋಣೆಯಿಂದ 107.090 ಗ್ರಾಂ ಎಂಡಿಎಂಎ ವಶಪಡಿಸಲಾಗಿತ್ತು. ಮುಹಮ್ಮದ್ ರಫೀಖ್ ನನ್ನು ವಿಚಾರಣೆ ನಡೆಸಿದಾಗ ತನಿಗೆ ಎಂಡಿಎಂಎ ಪೂರೈಸಿದ ವ್ಯಕ್ತಿಯ ಬಗ್ಗೆ ಅಲಕ್ಸ್ ಸುಳಿವು ನೀಡಿದ್ದನು. ಅದರಂತೆ ಅಲಕ್ಸ್ ಚಾಕೋ ಬಂಧನ ನಡೆದಿದೆ.
ನಿಷೇಧಿತ ಮಾದಕವಸ್ತುಗಳ ಮಾರಾಟ ತಡೆಗಟ್ಟುವ ನಿಟ್ಟಿನಲ್ಲಿ ಕಣ್ಣೂರು ರೇಂಜ್ ಮಟ್ಟದಲ್ಲಿ ನಡೆಯುತ್ತಿರುವ ಕೋಂಬಿಂಗ್ ಅಂಗವಾಗಿ ವಿವಿದ ಠಾಣಾ ವ್ಯಾಪ್ತಿಗಳಲ್ಲಿ ತಪಾಸಣೆ ಬಿಗುಗೊಳಿಸಲಾಗಿದೆ. ಜಿಲ್ಲಾ ಪೊಲೀಸ್ ಅಧಿಕಾರಿ ಬಿ.ವಿ.ವಿಜಯ ಭರತ್ ರೆಡ್ಡಿ ಅವರ ಆದೇಶದಂತೆ ವಿದ್ಯಾನಗರ ಇನ್ಸ್ಪೆಕ್ಟರ್ ವಿಪಿನ್.ಯು.ಪಿ.ಅವರ ಮೇಲ್ನೋಟದಲ್ಲಿ ಕಾರ್ಯಾಚರಣೆ ನಡೆದಿದೆ. ಬದಿಯಡ್ಕ ಪೊಲೀಸ್ ಠಾಣೆಯ ಹೆಚ್ಚುವರಿ ಕರ್ತವ್ಯದಲ್ಲಿರುವ ವಿದ್ಯಾನಗರ ಎಸ್.ಐ. ಪ್ರತೀಶ್ ಕುಮಾರ್, ಇತರ ಅಧಿಕಾರಿಗಳಾದ ರೂಪೇಶ್, ರಾಧಾಕೃಷ್ಣನ್, ಅನಿತ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು
0 Comments