Ticker

6/recent/ticker-posts

Ad Code

ಆಟವಾಡಲೆಂದು ಮನೆಯಿಂದ ಹೊರಟ ಇಬ್ಬರು ಮಕ್ಕಳು ನಾಪತ್ತೆ


 ಕಾಸರಗೋಡು: ಆಟವಾಡಲೆಂದು ಮನೆಯಿಂದ ಹೊರಟ ಇಬ್ಬರು ಮಕ್ಕಳು ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ವಿದ್ಯಾನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಚೆಂಗಳ ತೈವಳಪ್ ಬಳಿಯ 14,16 ವರ್ಷದ ಇಬ್ಬರು ಮಕ್ಕಳು ನಾಪತ್ತೆಯಾಗಿದ್ದಾರೆ. ಗೆಳೆಯರಾದ ಇವರು ನಿನ್ನೆ (ಸೋಮವಾರ) ಸಾಯಂಕಾಲ 4.30 ರ ವೇಳೆ  ಆಟವಾಡಲು ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ರಾತ್ರಿಯಾದರೂ ಇವರು ಹಿಂತಿರುಗದ ಹಿನ್ನೆಲೆಯಲ್ಲಿ ಮಕ್ಕಳ ಹೆತ್ತವರು ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Post a Comment

0 Comments