Ticker

6/recent/ticker-posts

Ad Code

ಪಾಕಿಸ್ಥಾನವನ್ನು ಬಗ್ಗು ಬಡಿದ ಭಾರತೀಯ ಸೇನೆಗೆ ಅಭಿನಂದನೆ ;ಅಖಿಲ ಭಾರತೀಯ ಪೂರ್ವ ಸೈನಿಕ ಪರಿಷತ್ ಹಾಗೂ ರಾಷ್ಟ್ರ ಭಕ್ತರ ಆಶ್ರಯದಲ್ಲಿ ಕಾಞಂಗಾಡಿನಲ್ಲಿ ತ್ರಿವರ್ಣ ಸ್ವಾಭಿಮಾನ ಯಾತ್ರೆ


 ಕಾಞಂಗಾಡ್: ಪಾಕಿಸ್ಥಾನವನ್ನು ಬಗ್ಗು ಬಡಿದ ಭಾರತೀಯ ಸೇನೆಗೆ ಅಭಿನಂದನೆಗಳನ್ನು ಸಲ್ಲಿಸಿ ಅಖಿಲ ಭಾರತೀಯ ಪೂರ್ವ ಸೈನಿಕ ಪರಿಷತ್ ಹಾಗೂ ರಾಷ್ಟ್ರ ಭಕ್ತರ ಆಶ್ರಯದಲ್ಲಿ ಕಾಞಂಗಾಡಿನಲ್ಲಿ ತ್ರಿವರ್ಣ ಸ್ವಾಭಿಮಾನ ಯಾತ್ರೆ ನಡೆಯಿತು. ಕೇಣಲ್ ಪಿ.ದಾಮೋದರನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಅವರು ಮಾತನಾಡಿ ಮೇಕಿಂಗ್ ಇಂಡಿಯ ಮೂಲಕ ಭಾರತವು ಸೈನಿಕ ಶಕ್ತಿಯಾಗಿ ಹೊರಹೊಮ್ಮಿದೆ. 10 ವರ್ಷ ಕಳೆದರೆ ಭಾರತವು ಜಗತ್ತಿನ ಅತೀ ದೊಡ್ಡ ಸೈನಿಕ ಶಕ್ತಿಯಾಗಲಿದೆ ಎಂದರು. ಆಯುಧ ಮಾತ್ರ ಕೈಯಲ್ಲಿದ್ದು ಪ್ರಯೋಜನವಿಲ್ಲ, ಅದು ಶತ್ರುಗಳ ವಿರುದ್ದ ಪ್ರಯೋಗಿಸಲು ಇಚ್ಚಾಶಕ್ತಿಯೂ ಬೇಕು ಎಂದರು. ಪೂರ್ವ ಸೈನಿಕ ಪರಿಷತ್ ಜಿಲ್ಲಾ ಅಧ್ಯಕ್ಷ ರಾಜೀವನ್ ಪಾಲೋಟಿಲ್ ಅಧ್ಯಕ್ಷತೆ ವಹಿಸಿದರು. 

ರಕ್ಷಾಧಿಕಾರಿ ವಿ.ಜಿ.ಶ್ರೀಕುಮಾರ್ ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಉಪಾಧ್ಯಕ್ಷ ಪಿ.ರಾಜೀವನ್ ಸ್ವಾಗತಿಸಿ ಕೋಶಾಧಿಕಾರಿ ಮೇಲತ್ ತಂಬಾನ್ ನಂಬ್ಯಾರ್ ವಂದಿಸಿದರು.


 ಜಿಲ್ಲಾ ಕಾರ್ಯದರ್ಶಿ ಕೆ.ಪಿ.ರಾಜೀವನ್, ಮಾತೃಶಕ್ತಿ ಜಿಲ್ಲಾ ಅಧ್ಯಕ್ಷೆ ಸುಜಾತಾ ರಾಜೀವನ್, ಕಾರ್ಯದರ್ಶಿ ಪ್ರಿಯಾ ರಮೇಶನ್, ಬಿಜೆಪಿ ಮುಂದಾಳುಗಳಾದ ರಾಜ್ಯ ಕಾರ್ಯದರ್ಶಿ ಅಡ್ವ. ಕೆ.ಶ್ರೀಕಾಂತ್, ಜಿಲ್ಲಾ ಅಧ್ಯಕ್ಷೆ ಎಂ.ಎಲ್.ಅಶ್ವಿನಿ, ಪ್ರಧಾನ ಕಾರ್ಯದರ್ಶಿಗಳಾದ ಮನುಲಾಲ್ ಮೇಲತ್, ಪಿ.ಆರ್.ಸುನಿಲ್, ಇತರರಾದ ಎ.ವೇಲಾಯುಧನ್, ವಿಜಯ ಕುಮಾರ್ ರೈ, ಅಡ್ವ.ಕೆ.ನಾರಾಯಣನ್, ಎಸ್.ಪಿ.ಶಾಜಿ, ಗೋಪಾಲಕೃಷ್ಣ ತಚ್ಚಂಗಾಡ್, ಅಡ್ವ.ಎ.ಮಣಿಕಂಠನ್, ಪುಷ್ಪಾ ಗೋಪಾಲನ್, ಎಂ.ಬಲರಾಜ್, ಅಡ್ವ.ವಿ.ಬಾಲಕೃಷ್ಣ ಶೆಟ್ಟಿ ಸಹಿತ ಹಲವರು ಭಾಗವಹಿಸಿದರು. 




ಕೋಟ್ಟಚೇರಿಯಿಂದ ಹೊಸದುರ್ಗಕ್ಕೆ ನಡೆದ ತ್ರಿವರ್ಣ ಸ್ವಾಭಿಮಾನ ಯಾತ್ರೆಯಲ್ಲಿ ಹಲವಾರು ಮಂದಿ ಭಾಗವಹಿಸಿದರು.

Post a Comment

0 Comments