Ticker

6/recent/ticker-posts

Ad Code

ಕಾಞಂಗಾಡಿನಲ್ಲಿ‌ ನಕಲಿ‌ ದಾಖಲೆಗಳ‌ ನಿರ್ಮಾಣ ಕೇಂದ್ರಕ್ಕೆ ಪೊಲೀಸ್ ದಾಳಿ, ಮೂರು ಮಂದಿಯ ಸೆರೆ


 ಕಾಞಂಗಾಡ್: ಇಲ್ಲಿನ ಹೊಸದುರ್ಗದಲ್ಲಿ ಕಾರ್ಯಾಚರಿಸುತ್ತಿರುವ ನೆಟ್ ಫೋರ್ ಯು ಕಫೆಯಲ್ಲಿ ಕಳೆದ ಒಂದು ವರ್ಷದಿಂದ 1800 ಕ್ಕೂ ಹೆಚ್ಚು ನಕಲಿ ದಾಖಲೆಗಳು ಹಾಗೂ ಸರ್ಟಿಫಿಕೇಟ್ ಗಳನ್ನು ಸಿದ್ದ ಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಹೊಸದುರ್ಗ ಡಿ.ವೈ.ಎಸ್.ಪಿ.ಬಾಬು ಪೆರಿಂಗೋತ್ ಅವರ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಈ ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗಗೊಂಡಿದೆ. ತನಿಖೆ ಪೂರ್ಣಗೊಳ್ಳುವ ವೇಳೆ ಇನ್ನಷ್ಟು ಮಾಹಿತಿಗಳು ಬಹಿರಂಗಗೊಳ್ಳಲಿದೆ. 

ಕಂಪ್ಯೂಟರ್ ಸೆಂಟರ್ ಮಾಲಕ  ಕೊವ್ವಲ್ ಪಳ್ಳಿಯ  ಸಂತೋಷ್ ಕುಮಾರ್(45), ಹೊಸದುರ್ಗ ನಿವಾಸಿ ಶಿಹಾಬ್(38),  ಮುಯಕ್ಕೋಂ ನಿವಾಸಿ ರವೀಂದ್ರನ್(51) ಬಂಧಿತರು. ಇವರನ್ನು  ವಿಚಾರಣೆ ‌ನಡೆಸಿದಾಗ ಪ್ರಕರಣದ ಇನ್ನಷ್ಟು ಮಾಹಿತಿಗಳು ಬಹಿರಂಗಗೊಂಡಿದೆ. ವಿಶ್ವ ವಿದ್ಯಾಲಯಗಳ ಪದವಿ ಪ್ರಮಾಣಪತ್ರ,  ಡ್ರೈವಿಂಗ್ ಲೈಸೆನ್ಸ್,  ಪಾಸ್‌ಪೋರ್ಟ್, ಆಧಾರ್ ಕಾರ್ಡು ಎಂಬಿವು ಇಲ್ಲಿ ನಕಲಿಯಾಗಿ ನಿರ್ಮಿಸಿ ನೀಡಲಾಗುತ್ತಿತ್ತುಮ ಕಣ್ಣೂರು, ಕಾಲಿಕಟ್ ವಿಶ್ವ ವಿದ್ಯಾಲಯಗಳ ಪ್ರಮಾಣಪತ್ರಗಳಿಗೆ ಹೆಚ್ಚು ಬೇಡಿಕೆಯಿತ್ತೆಂದು ಆರೋಪಿಗಳು ಹೇಳಿದ್ದಾರೆ. ಕೇರಳ, ಕರ್ಣಾಟಕದ ಹಲವು ಆರ್.ಟಿ‌ಇ.ಕಚೇರಿಗಳ ನಕಲಿ ದಾಖಲೆ ಪತ್ರಗಳನ್ನು ನಿರ್ಮಿಸಲಾಗಿದೆ. ನಕಲಿ ದಾಖಲೆಗಳಿಗೆ 10 ಸಾವಿರ ರೂ.ಶುಲ್ಕವೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿರ ರವೀಂದ್ರನ್ ನಕಲಿ ದಾಖಲೆ ಸಿದ್ದಪಡಿಸಿದ ವ್ಯಕ್ತಿ. ಅನಂತರ ಶಿಹಾಬ್ ಗೆ ಕಳುಹಿಸಿಕೊಡಲಾಗುತ್ತದೆ. ಶಿಹಾಬ್ ಅದರ ಪ್ರಿಂಟ್ ತೆಗೆದು ಕಳುಹಿಸಿ ಕೊಡುತ್ತಿದ್ದನೆಂದು ತಿಳಿದು ಬಂದಿದೆ.

Post a Comment

0 Comments