ನವದೆಹಲಿ: ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಪಾಕಿಸ್ತಾನದ ವಿರುದ್ಧ ನಡೆದ ಆಪರೇಷನ್ ಸಿಂಧೂರ ಸೈನಿಕ ಕಾರ್ಯಾಚರಣೆಯ ವಿಷಯದಲ್ಲಿ ನರೇಂದ್ರ ಮೋದಿ ಇಲ್ಲಿಯವರೆಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿರಲಿಲ್ಲ. ಹೀಗಾಗಿ ಇಂದು ಏನು ಹೇಳುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಸೈನಿಕ ಕಾರ್ಯಾಚರಣೆಯ ಬಗ್ಗೆ ಸೈನಿಕ ಅಧಿಕಾರಿಗಳು, ವಿದೇಶಾಂಗ ವಕ್ತಾರರು ಮಾತ್ರ ಹೇಳಿಕೆ ನೀಡಿದ್ದರು. ಆದುದರಿಂದ ಪ್ರಧಾನಮಂತ್ರಿಯವರ ಇಂದಿನ ಭಾಷಣ ಹೆಚ್ಚು ಮಹತ್ವ ಪಡೆದಿದೆ.
0 Comments