ಬದಿಯಡ್ಕ: ಅಸೌಖ್ಯದಿಂದಾಗಿ ಕಳೆದ ಮೂರು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದ 9 ವರ್ಷದ ಬಾಲಕ ಮೃತಪಟ್ಟ ಘಟನೆ ನಡೆದಿದೆ. ನೆಲ್ಲಿಕಟ್ಟೆ ಸಮಿಪದ ಪೈಕ ಚಂಬಟವಳಪ್ ನಿವಾಸಿ ಗಣೇಶ-ಪ್ರಿಯ ದಂಪತಿಯ ಪುತ್ರ ಅಭಿನವ್ ಮೃತಪಟ್ಟ ಬಾಲಕ. ಆದಿತ್ಯವಾರ ಸಂಜೆ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಅಭಿನವ್ ಕೊನೆಯುಸಿರೆಳೆದನು.
ಕಳೆದ ಮೂರು ವರ್ಷಗಳಿಂದ ಅಭಿನವ್ ನ ಚಿಕಿತ್ಸೆಗಾಗಿ ಲಕ್ಷಾಂತರ ರೂ.ಖರ್ಚು ಮಾಡಲಾಗಿತ್ತು. ಮಂಗಳೂರು, ತಲಶೇರಿ ಸಹಿತ ವಿವಿದ ಆಸ್ಪತ್ರೆಗಳಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗಿತ್ತು. ವಿವಿದ ಸಂಘ ಸಂಸ್ಥೆಗಳು, ವ್ಯಕ್ತಿಗಳು ಬಾಲಕನ ಚಿಕಿತ್ಸೆಗಾಗಿ ನೆರವು ನೀಡಿದ್ದರು. ಆದರೂ ಸಹ ಚಿಕಿತ್ಸೆ ಫಲಾಕಾರಿಗಾಗದ ಹಿನ್ನೆಲೆಯಲ್ಲಿ ಅಭಿನವ್ ಕೊನೆಯುಸಿರೆಳೆದನು. ಮೃತನು ತಂದೆ, ತಾಯಿ, ಸಹೋದರಿ ಅನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ
0 Comments