Ticker

6/recent/ticker-posts

ಪುತ್ತೂರು ಪಾಣಾಜೆ ಕಾಟುಕುಕ್ಕೆ ಅಡ್ಕಸ್ಥಳ ಮೂಲಕ ಕೆ ಎಸ್ ಆರ್ ಟಿಸಿ ಬಸ್ ಸೇವೆ ಉದ್ಘಾಟನೆ



ಪಾಣಾಜೆ: ಕೆ ಎಸ್ ಆರ್ ಟಿಸಿಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ನೇಮಕಾತಿ ನಡೆದಿಲ್ಲ. ಪ್ರಸ್ತುತ 4,500 ಡ್ರೈವರ್ ಕಂ ಕಂಡಕ್ಟರ್ ನೇಮಕಾತಿ ನಡೆದಿದೆ. ಪುತ್ತೂರು ಡಿಪೋಗೆ 500 ಡ್ರೈವರ್ ಕಂ ಕಂಡಕ್ಟರ್ ನೇಮಕಾತಿಗೆ ಮನವಿ ಮಾಡಲಾಗಿದೆ. ಇದು ಈಡೇರಿದ ಕೂಡಲೆ ಸಾರ್ವಜನಿಕರು ಬೇಡಿಕೆ ಇರಿಸಿದ ಮಾರ್ಗದಲ್ಲಿ ಬಸ್ ಸೇವೆ ಆರಂಭಿಸಲಾಗುವುದು. ಸಾರ್ವಜನಿಕರು ಸರಕಾರಿ ಸೇವೆಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕು‌ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಆಗ್ರಹಿಸಿದರು.


ಪಾಣಾಜೆ ಅರ್ದಮೂಲೆ ಪೊಲೀಸ್ ಚೆಕ್ ಪೋಸ್ಟ್ ಬಳಿ ಪುತ್ತೂರಿನಿಂದ ಪಾಣಾಜೆ ಕಾಟುಕುಕ್ಕೆ ಮಾರ್ಗವಾಗಿ ಅಡ್ಕಸ್ಥಳ ವಿಟ್ಲ ಸೇವೆಯ ಹೊಸ ಕೆ ಎಸ್ ಆರ್ ಟಿಸಿ ಬಸ್ ಸೇವೆಯನ್ನು ಉದ್ಘಾಟಿಸಿ ಮಾತನಾಡಿದರು‌.


ಕೇರಳ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರ ಅಗತ್ಯಕ್ಕಾಗಿ ಕಾಟುಕುಕ್ಕೆ ಮಾರ್ಗದಲ್ಲಿ ಹೊಸ ಬಸ್ ಸೇವೆ ಆರಂಭಿಸಲಾಗಿದೆ. ಸುಮಾರು ಒಂದು ವರ್ಷದ ಸಾರ್ವಜನಿಕರ ಬೇಡಿಕೆಯನ್ನು ಪ್ರಸ್ತುತ ಈಡೇರಿಸಲಾಗಿದೆ. ಪ್ರಸ್ತುತ ಕಾಟುಕುಕ್ಕೆ ದೇಗುಲದ ಬ್ರಹ್ಮಕಲಶೋತ್ಸವದ ಅಂಗವಾಗಿ ತಾತ್ಕಾಲಿಕ ವ್ಯವಸ್ಥೆಯಡಿ ಬಸ್ ಸೇವೆ ಆರಂಭಿಸಲಾಗಿದೆ. ಅಂತಾರಾಜ್ಯ ಪರವಾನಗಿ ಪ್ರಕ್ರಿಯೆಗಳ ಬಳಿಕ ಈ ಸೇವೆಯನ್ನು ಖಾಯಂ ಗೊಳಿಸಲಾಗುವುದು‌. ಕೇರಳ ಮೂಲಕ ಹಾದು ಹೋಗುವ ಕರ್ನಾಟಕ ಭಾಗದ ರಸ್ತೆಯ ದುರಸ್ತಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಭರವಸೆ ನೀಡಿದರು. 


ಎಣ್ಮಕಜೆ ಗ್ರಾಪಂ ಸದಸ್ಯರಾದ ರಾಮಚಂದ್ರ ಎಂ., ನರಸಿಂಹ ಪೂಜಾರಿ ಎಸ್.ಬಿ. ಪಾಣಾಜೆ ಬಸ್ ಸೇವೆಯನ್ನು ಸ್ವರ್ಗ ತನಕ ವಿಸ್ತರಿಸುವಂತೆ ಆಗ್ರಹಿಸಿ ಶಾಸಕರಿಗೆ ಮನವಿ ಸಲ್ಲಿಸಿದರು. ಕೇರಳ ಭಾಗದ ಜನರ ಬೇಡಿಕೆಯಂತೆ ಪುತ್ತೂರು ಪಾಣಾಜೆ ಬಸ್ ಸೇವೆಯನ್ನು ಕೇರಳದ ಸ್ವರ್ಗ ತನಕ ವಿಸ್ತರಿಸಲಾಗುವುದು‌. ಈ ನಿಟ್ಟಿನಲ್ಲಿ ಸಾರ್ವಜನಿಕರು, ಜನ ಪ್ರತಿನಿಧಿಗಳು ಸಹಕರಿಸಬೇಕು ಎಂದು ಶಾಸಕರು ವಿನಂತಿಸಿದರು.


ಪಾಣಾಜೆ ಗ್ರಾಪಂ ಅಧ್ಯಕ್ಷೆ ಮೈಮೂನತ್ತುಲ್ ಮೆಹ್ರಾ, ಉಪಾಧ್ಯಕ್ಷೆ ಜಯಶ್ರೀ ದೇವಸ್ಯ, ಸದಸ್ಯರಾದ ವಿಮಲ ಅರ್ದಮೂಲೆ, ಕೃಷ್ಣಪ್ಪ ಪೂಜಾರಿ, ನಾರಾಯಣ ನಾಯ್ಕ, ಕೆ ಎಸ್ ಆರ್ ಟಿಸಿ ವಿಭಾಗೀಯ ಅಧಿಕಾರಿ ಜೈಶಾಂತ್, ಡಿಪೋ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್, ಸಹಾಯಕ ಕಾರ್ಯಾಧೀಕ್ಷ ನಟರಾಜ್, ವೆಂಕಟ್ರಮಣ ಭಟ್ ಉಪಸ್ಥಿತರಿದ್ದರು.


ವಿಶ್ವನಾಥ ರೈ ಕಡಮಾಜೆ, ಸದಾಶಿವ ರೈ ಸೂರಂಬೈಲು, ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ಜಗನ್ ಮೋಹನ್ ರೈ, ಅಂಬಿಕಾ ಭರಣ್ಯ, ಬಾಬು ರೈ ಕೋಟೆ ಎಸ್.ಅಬೂಬಕ್ಕರ್ ಆರ್ಲಪದವು, ಸದಾನಂದ ನಾಯ್ಕ್ ಭರಣ್ಯ, ಕಾಟುಕುಕ್ಕೆ ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ನಾರಾಯಣ ಕಾಟುಕುಕ್ಕೆ, ವಕೀಲ ಸುಧಾಕರ್ ರೈ, ಸುನಿಲ್‌ ಕುಮಾರ್ ರೈ ಕೆಂಗಣಾಜೆ, ಪ್ರಸಾದ್ ರೈ ಮುಂಗ್ಲಿಕ್ಕಾನ, ಜಗನ್ನಾಥ ರೈ ಪಡ್ಡಂಬೈಲು ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments