Ticker

6/recent/ticker-posts

ಹುಚ್ಚು ನಾಯಿ ಕಡಿತಕ್ಕೊಳಗಾಗಿ‌ ಮೂರು ಸಲ ಲಸಿಕೆ ಪಡೆದಿದ್ದ ಏಳು ವರ್ಷದ ಬಾಲಕಿ‌ ಮೃತ್ಯು


 ಹುಚ್ಚು ನಾಯಿ ರೋಗಕ್ಕಾಗಿ ಮೂರು ಸಲ ಲಸಿಕೆ ಪಡೆದಿದ್ದ ಏಳು ವರ್ಷದ ಬಾಲಕಿ ಆಸ್ಪತ್ರೆಯಲ್ಲಿ ‌ಮೃತಪಟ್ಟ ಘಟನೆ ನಡೆದಿದೆ. ಕೊಲ್ಲಂ ಪತ್ತನಾಪುರಂ‌‌ ನಿವಾಸಿ ನಿಯಾ‌ ಫೈಸಲ್‌ ಮೃತಪಟ್ಟ ಬಾಲಕಿ. ತಿರುವನಂತಪುರಂ ‌ಎಸ್.ಎ.ಟಿ.ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಾಲಕಿ ಆದಿತ್ಯವಾರ ರಾತ್ರಿ ಕೊನೆಯುಸಿರೆಳೆದಳು.

   ಎಪ್ರಿಲ್ 8 ರಂದು ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಬೀದಿ‌ನಾಯಿ ಕಚ್ಚಿತ್ತು. ಬಾಲಕಿಯ ಕೈಗೆ ಗಾಯಗೊಂಡ ಹಿನ್ನೆಲೆಯಲ್ಲಿ ಕೂಡಲೇ ಆಸ್ಪತ್ರೆಗೆ ಕೊಂಡೊಯ್ದು‌ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ನೀಡಲಾಗಿತ್ತು. ಒಟ್ಟು 3 ಸಲ ಇದೆ ಲಸಿಕೆ ನೀಡಲಾಯಿತು. ಮೇ.6 ರಂದು ಪುನಃ ಲಸಿಕೆ ಪಡೆಯಲಿದ್ದು ಈ ವೇಳೆ ಬಾಲಕಿಗೆ ಜ್ವರ‌ ಕಾಣಿಸಿಕೊಂಡಿತು.‌ಕೂಡಲೇ ತಪಾಸಣೆ ನಡೆಸಿದಾಗ ಮಗುವಿಗೆ‌ ಹುಚ್ಚು ನಾಯಿ ರೋಗ‌ ಹರಡಿರುವುದು ತಿಳಿದುಬಂತು. ಅನಂತರ ಬಾಲಕಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಯಿತು.

 ಕಳೆದ ಒಂದು ವಾರದಲ್ಲಿ ‌ಹುಚ್ಚು ನಾಯಿ ಕಚ್ಚಿದ ನಂತರ ಲಸಿಕೆ ಪಡೆದೂ ಸಹ‌ ಮೃತಪಟ್ಟ ಇದು ಎರಡನೇ ಘಟನೆಯಾಗಿದೆ.

Post a Comment

0 Comments