Ticker

6/recent/ticker-posts

ನಿವೃತ್ತ ಕಮಾಂಡೋ ಎಡನೀರಿನ ಶ್ಯಾಮ್‌ರಾಜ್ ಪತ್ನಿ ಶಿವಪ್ರಿಯಾ ಎಸ್.ಗೆ ಡಾಕ್ಟರೇಟ್


ಕಾಸರಗೋಡು: ಎಡನೀರು ನಿವಾಸಿಯೂ ನಿವೃತ್ತ ಕಮಾಂಡೋ ಶ್ಯಾಮರಾಜ್ ಇ.ವಿ. ಅವರ ಪತ್ನಿ ಲೆಪ್ಟಿನೆಂಟ್ ಕರ್ನಲ್ ಶಿವಪ್ರಿಯ ಎಸ್. ಅವರಿಗೆ ಕರ್ನಾಟಕ  ರಾಜೀವ್ ಗಾಂಧಿ   ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ. ವಿವಿಯ 27ನೇ ಘಟಿಕೋತ್ಸವದಲ್ಲಿ ಪದವಿ ಪ್ರಧಾನ ಮಾಡಲಾಯಿತು. ಡಾ. ಸುಧಾ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಶಿವಪ್ರಿಯ ಅವರ ಪ್ರಸೂತಿ ಮತ್ತು  ಸ್ತ್ರೀರೋಗ    ನರ್ಸಿಂಗ್ ಎಂಬ ಮಹಾಪ್ರಬಂಧಕ್ಕೆ  ಡಾಕ್ಟರೇಟ್ ಲಭಿಸಿರುವುದು.


ಡಾ. ಶಿವಪ್ರಿಯ ಎಸ್. ಅವರು ಪ್ರಸ್ತುತ ಚೆನ್ನೈಯ ನೀಲಗಿರಿ ಮಿಟಲಿರಿ ಹಾಸ್ಪಿಟಲ್‌ನಲ್ಲಿ ಲೆಪ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ಯಾಮರಾಜ್ ಇ.ವಿ. ಅವರು 21ನೇ ಸ್ಪೆಶಲ್ ಪೋರ್ಸ್‌ನ ಕಮಾಂಡೋ  ಆಗಿ ಆಪರೇಷನ್ ರೈನ್ಹೋ, ವಿಜಯ್, ರಕ್ಷಕ್, ಪರಾಕ್ರಮ್‌ಗಳಲ್ಲಿ ಭಾಗವಹಿಸಿದ್ದರು. ಯಶಸ್ವಿ ಪರಾಕ್ರಮ್‌ನಲ್ಲಿ ಭಾಗವಹಿಸಿ ಹಿಂತಿರುತ್ತಿದ್ದಾಗ ಉಂಟಾದ ಅಪಘಾತದಲ್ಲಿ ಶಾಶ್ವತ ಗಾಲಿಕುರ್ಚಿ ಅವಲಂಬಿತರಾಗಿದ್ದಾರೆ.  ಪ್ರಸ್ತುತ ಚೆನ್ನೈಯಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ.

ಚಿತ್ರ ಕೃಪೆ :ಶಿವಪ್ರಿಯ


Post a Comment

0 Comments