ಪಾಲಕ್ಕಾಡ್: ಮಣ್ಣಾರ್ ಕಾಡ್ ಕಾಞಿರಪುರ ನಿವಾಸಿಯ ಕೊಳೆತ ಮೃತದೇಹ ಜಮ್ಮು ಕಾಶ್ಮೀರದಲ್ಲಿ ಕಾಡಿನೊಳಗೆ ಪತ್ತೆಯಾಗಿದೆ. ಕಾಞಿರಪುಯ, ಕರುವಾನ್ ತೊಡಿ ನಿವಾಸಿ ಮುಹಮ್ಮದ್ ಶಾನಿಬ್(28) ಎಂಬಾತ ಮೃತಪಟ್ಟ ಯುವಕ. ಮಂಗಳವಾರದಂದು ಜಮ್ಮು ಕಾಶ್ಮೀರದ ಗುಲ್ಮಾರ್ಗ್ ಪೊಲೀಸ್ ಠಾಣೆಯಿಂದ ಕರೆ ಬಂದಿದ್ದು ಮನೆಯವರು ಅತ್ತ ಹೋಗಿದ್ದಾರೆ.
ಮೃತ ಶಾನಿಬಗ ಬೆಂಗಳೂರಿನಲ್ಲಿ ವಯರಿಂಗ್ ಕಾರ್ಮಿಕನಾಗಿದ್ದಾನೆ. ಕೆಲಸಕ್ಕೆಂದು ಈತ ಮನೆಯಿಂದ ಬೆಂಗಳೂರಿಗೆ ಹೋಗಿದ್ದು ಹಿಂತಿರುಗಿರಲಿಲ್ಲ. ಪುಲ್ವಾಮಾ ಬಳಿಯ ಕಾಡಿನೊಳಗೆ ಮೃತದೇಹ ಪತ್ತೆಯಾಗಿದೆ. 10 ದಿನಗಳ ಹಿಂದೆಯೇ ಮೃತಪಟ್ಟಿರಬೇಕು ಎಂದು ಸಂಶಯಿಸಲಾಗಿದೆ. ಈತ ಜಮ್ಮು ಕಾಶ್ಮೀರದ ಕಾಡಿನೊಳಗೆ ಹೋಗಲು ಕಾರಣವೇನು ಎಂದು ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದಾರೆ
0 Comments