Ticker

6/recent/ticker-posts

ಜೆ.ಸಿ.ಬಿ.ಚಾಲಕನ ಮೃತದೇಹ ಬಾಡಿಗೆ‌ ಮನೆಯಲ್ಲಿ‌ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಬದಿಯಡ್ಕ: ಜೆ.ಸಿ.ಬಿ. ಚಾಲಕನ ಮೃತದೇಹ ಮನೆಯ ಅಡಿಗೆ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ‌ಪತ್ತೆಯಾಗಿದೆ. ಸುಳ್ಯ ಪೆರಾಜೆ ನಿಧಿಮಲ‌ ನಿವಾಸಿ ಹಾಗೂ ನೀರ್ಚಾಲು ‌ಪಾಡಲಡ್ಕ ಬಳಿಯ ನಿಡುಗಳದಲ್ಲಿ ಬಾಡಿಗೆ‌ ಮನೆಯಲ್ಲಿ ವಾಸಿಸುವ ಕುಮಾರ ಟಿ.ಎನ್(26) ಮೃತಪಟ್ಟವರು. ಕಳೆದ ಐದು ವರ್ಷಗಳಿಂದ ಇವರು ನಿಡುಗಳದಲ್ಲಿ ವಾಸಿಸುತ್ತಿದ್ದು ಜೆಸಿಬಿ ಚಾಲಕರಾಗಿ ದುಡಿಯುತ್ತಿದ್ದರು. ನಿನ್ನೆ (ಸೋಮವಾರ) ಸಾಯಂಕಾಲ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ಗೆಳೆಯರೊಬ್ಬರು ಫೋನ್ ಮಾಡಿದಾಗ ಕರೆ ಎತ್ತದ ಕಾರಣ ಬಂದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಸುಳ್ಯ ಪೇರಾಜೆ ನಿಧಿಮಲೆಯ ನಾರಾಯಣ- ಜಯಂತಿ ದಂಪತಿಯ ಪುತ್ರರಾಗಿರುವ ಇವರು ಅವಿವಾಹಿತರಾಗಿದ್ದಾರೆ. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದರು. ಮೃತದೇಹವನ್ನು ‌ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಮೃತರು ತಂದೆ, ತಾಯಿ, ಸಹೋದರಿ‌ ಸುಮಿತ್ರ ಎಂಬಿವರನ್ನು ಅಗಲಿದ್ದಾರೆ

Post a Comment

0 Comments